ಕರ್ನೂಲು : ಹೈದರಾಬಾದ್‌ನಿಂದ ಬೆಂಗಳೂರಿಗೆ ತೆರಳುತ್ತಿದ್ದ ಕಾವೇರಿ ಟ್ರಾವೆಲ್ಸ್‌ಗೆ ಸೇರಿದ ವೋಲ್ವೋ ಸ್ಲೀಪರ್ ಬಸ್ ನಿನ್ನೆ ಆಂಧ್ರಪ್ರದೇಶದ ಕರ್ನೂಲ್ ನಲ್ಲಿ ಅಪಘಾತಕ್ಕೀಡಾಗಿ ಬೆಂಕಿಗೆ ಆಹುತಿಯಾಗಿತ್ತು. ಈ ಭೀಕರ ದುರಂತದಲ್ಲಿ ಬಸ್‌ನಲ್ಲಿದ್ದ 20ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದು, ಇದೀಗ ನಕಲಿ ಅಂಕಪಟ್ಟಿ ನೀಡಿ ಡ್ರೈವಿಂಗ್ ಲೈಸನ್ಸ್ ಪಡೆದಿದ್ದ ಬಸ್ ಚಾಲಕ ಮೆರಿಯಾಲ ಲಕ್ಷ್ಮಯ್ಯನನ್ನು ಬಂಧಿಸಲಾಗಿದೆ.

ಬಂಧಿತ ಬಸ್ ಚಾಲಕ ಮೆರಿಯಾಲ ಲಕ್ಷ್ಮಯ್ಯ ಪಲ್ನಾಡ್ ನಗರದ ನಿವಾಸಿಯಾಗಿದ್ದು, ಈತ 10ನೆ ಕ್ಲಾಸ್ ಪಾಸ್ ಆಗಿರೋ ನಕಲಿ ಅಂಕಪಟ್ಟಿ ನೀಡಿ ಡ್ರೈವಿಂಗ್ ಲೈಸನ್ಸ್ ಪಡೆದಿದ್ದ. ಈ ದುರಂತ ಸಂಬಂಧ ಬಸ್ ಚಾಲಕ ಮೆರಿಯಾಲ ಲಕ್ಷ್ಮಯ್ಯ ನನ್ನು ಪೊಲೀಸರು ಅರೆಸ್ಟ್ ಮಾಡಿ ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಗ್ಯಾಸ್ ಗೀಸರ್ ಸಿಲಿಂಡರ್ ಸೋರಿಕೆ ಶಂಕೆ – ಸ್ನಾನ ಮಾಡುವಾಗ ಉಸಿರುಗಟ್ಟಿ ಅಕ್ಕ-ತಂಗಿ ಸಾವು!
Author: Btv Kannada
Post Views: 666







