ಬೆಂಗಳೂರು : ಸ್ನೇಹಿತೆಯ ಖಾಸಗಿ ವಿಡಿಯೋ, ಫೋಟೋ ಕದ್ದು ಬ್ಲಾಕ್ಮೇಲ್ಗೆ ಪ್ರಚೋದನೆ ನೀಡಿದ ಆರೋಪದಡಿ ಕಿರುತೆರೆ ನಟಿ ಆಶಾ ಜೋಯಿಸ್ ವಿರುದ್ಧ ಕೇಸ್ ದಾಖಲಾಗಿದೆ. ಕಿರುತೆರೆ ನಟಿ ವಿರುದ್ಧ 2 ಕೋಟಿಗೆ ಬ್ಲಾಕ್ಮೇಲ್ ಮಾಡಲು ಪ್ರಚೋದನೆ ನೀಡಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ 61 ವರ್ಷದ ಪಾರ್ವತಿ ಎಂಬುವವರು ದೂರಿನನ್ವಯ ನಟಿ ಮೇಲೆ FIR ದಾಖಲಾಗಿದೆ.

ಆಶಾ ಜೋಯಿಸ್ ಕನ್ನಡದ ಅನೇಕ ಧಾರವಾಹಿಗಳಲ್ಲಿ ಪೋಷಕ ಪಾತ್ರದಲ್ಲಿ ನಟಿಸಿದ್ದು, ಮೂರು ವರ್ಷದ ಹಿಂದೆ ಆಶಾ ತಾನು ಶೃಂಗೇರಿ ಮಠದ ಜೋಯಿಸ್ ಕುಟುಂಬದವಳು, ಸೀರಿಯಲ್ ನಟಿ ಎಂದು ಪರಿಚಯ ಮಾಡಿಕೊಂಡಿದ್ದರು. ಪಾರ್ವತಿ ತಾವು ಕೆಲಸ ಮಾಡುತ್ತಿದ್ದ ಕಂಪನಿ ಮಾಲೀಕರ ಜೊತೆಯೇ ಮದುವೆ ಆಗಿದ್ದರು. ಈ ವಿಚಾರ ತಿಳಿದುಕೊಂಡ ಆಶಾ ಜೋಯಿಸ್, ಪಾರ್ವತಿ ಪತಿಗೆ 2 ಕೋಟಿ ಹಣಕ್ಕೆ ಬ್ಲ್ಯಾಕ್ಮೇಲ್ ಮಾಡುವಂತೆ ಒತ್ತಡ ಹೇರಿದ್ದರು ಎನ್ನಲಾಗಿದೆ. ಇದಕ್ಕೆ ಪಾರ್ವತಿ ಒಪ್ಪದೆ ನಿರಾಕರಿಸಿದ್ದಳು.

ಇದೇ ದ್ವೇಷಕ್ಕೆ ನಟಿ ಖಾಸಗಿ ವಿಡಿಯೋಗಳು, ವಾಯ್ಸ್ ರೆಕಾರ್ಡ್ ಹಾಗೂ ಪ್ರೈವೇಟ್ ಫೋಟೋಗಳನ್ನ ಕದ್ದು ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾರೆ. ಈ ಹಿನ್ನಲೆಯಲ್ಲಿ ತನ್ನ ಘನತೆಗೆ ಕುಂದುಂಟಾಗಿದೆ ಹಾಗು ತನ್ನ ಖಾಸಗಿ ಡೇಟಾವನ್ನ ಕದ್ದಿದ್ದಾರೆಂದು ಆರೋಪಿಸಿ ಪಾರ್ವತಿ ತಿಲಕನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.


ಇದನ್ನೂ ಓದಿ : ಮೈಸೂರು ಚಾಮುಂಡೇಶ್ವರಿ ತಾಯಿಯ ಸನ್ನಿಧಿಯಲ್ಲಿ “ಜುಮ್ಕಿ” ಚಿತ್ರದ ಸ್ಕ್ರಿಪ್ಟ್ ಪೂಜೆ!







