ಚಾಮರಾಜನಗರ : ಕುಡಿದ ಮತ್ತಿನಲ್ಲಿ ಪೊಲೀಸ್ ಅಧಿಕಾರಿ ಬೇರೆಯವರ ಮನೆಯ ಬಾಗಿಲು, ಕಿಟಕಿ ಹೊಡೆದು ಹುಚ್ಚಾಟ ಮೆರೆದಿರುವ ಘಟನೆ ಚಾಮರಾಜನಗರದ ಗಂಗಾಮತಸ್ಥರ ಬೀದಿಯಲ್ಲಿ ನಡೆದಿದೆ.

ಮೀಸಲು ಪಡೆಯ ಸಬ್ ಇನ್ಸ್ಪೆಕ್ಟರ್ ಬಾವು ಸಾಬ್ ಎಂಬಾತ ಈ ರೀತಿ ಅಸಭ್ಯವಾಗಿ ವರ್ತಿಸಿದ್ದಾನೆ. RSI ಬಾವು ಸಾಬ್ ಬೇರೆಯವರ ಮನೆಯ ಬಾಗಿಲು,ಕಿಟಕಿ ಹೊಡೆದು ಹಾಕಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪರಿಶೀಲನೆ ನಡೆಸಿದ ಬಳಿಕ ಪೊಲೀಸರು RSI ಬಾವು ಸಾಬ್ರನ್ನು ವಶಕ್ಕೆ ಪಡೆದಿದ್ದು, ಈ ಸಂಬಂಧ ಚಾಮರಾಜನಗರ ಪಟ್ಟಣ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ : ಸಾರ್ವಜನಿಕರ ಜೊತೆ ಸಜ್ಜನಿಕೆಯಿಂದ ವರ್ತಿಸಿ – ಪೊಲೀಸರಿಗೆ ಖಡಕ್ ಸುತ್ತೋಲೆ ಹೊರಡಿಸಿದ DG-IGP ಡಾ.ಎಂ.ಎ ಸಲೀಂ!
Author: Btv Kannada
Post Views: 385







