ಯಶಸ್ವಿಯಾಗಿ 500 ಸಂಚಿಕೆ ಪೂರೈಸಿದ “ಸುವರ್ಣ ಗೃಹಮಂತ್ರಿ” – ಇದೇ ಅ.27ಕ್ಕೆ ರವಿಶಂಕರ್ ಗೌಡ ಕುಟುಂಬದ ಜೊತೆ ಸಂಭ್ರಮ!

ಬೆಂಗಳೂರು : ಕರ್ನಾಟಕದ ಗೃಹಿಣಿಯರ ಮನಗೆದ್ದು ಮನೆಮಾತಾಗಿರೋ ಜನಪ್ರಿಯ ಕಾರ್ಯಕ್ರಮ “ಸುವರ್ಣ ಗೃಹಮಂತ್ರಿ”. ಖ್ಯಾತ ನಟ ರವಿಶಂಕರ್ ಗೌಡ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ಈ ಕಾರ್ಯಕ್ರಮ ಕನ್ನಡ ಕಿರುತೆರೆಯಲ್ಲಿ ಪ್ರತಿದಿನ ಪ್ರಸಾರವಾಗುವ ಸಾಮಾನ್ಯ ಜನರ ರಿಯಾಲಿಟಿ ಶೋ.

ತನಗಾಗಿ ಏನನ್ನೂ ಬಯಸದೇ ತನ್ನವರ ಖುಷಿಗಾಗಿ ನಿರಂತರವಾಗಿ ಹಂಬಲಿಸುವ ಗೃಹಿಣಿಯರನ್ನು ಗೌರವಿಸುವ ನಿಟ್ಟಿನಲ್ಲಿ ಕರ್ನಾಟಕದ ಮನೆ ಮನೆಗೆ ಹೋಗಿ ದಿನಕ್ಕೊಂದು ಕುಟುಂಬವನ್ನು ಭೇಟಿ ಮಾಡಿ, ಗಂಡ ಹೆಂಡತಿ ಅವರನ್ನು ಆಟ ಆಡಿಸಿ , ಮಾತನಾಡಿಸಿ, ಆಕೆಯ ಕುಟುಂಬದವರ ಪರಿಚಯ ಮಾಡಿಕೊಂಡು, ಅವರಿಗಾಗಿ ಆ ದಿನವನ್ನು ಮೀಸಲಿಟ್ಟು ರಾಣಿ ಸೀಟ್ ನಲ್ಲಿ ಅವರನ್ನ ಕೂರಿಸಿ ಗೌರವಿಸುತ್ತಾ ಥ್ಯಾಂಕ್ಸ್ ಹೇಳುವ ಕಾರ್ಯಕ್ರಮವೇ ಈ “ಸುವರ್ಣ ಗೃಹಮಂತ್ರಿ”.

ಅಂತಹ ಮನೆ ಬೆಳಗೋ ಗೃಹಿಣಿಯರನ್ನು ಗುರುತಿಸಿ, ನಟ ರವಿ ಶಂಕರ್ ಗೌಡ ರವರು ಅಣ್ಣನ ಸ್ಥಾನದಲ್ಲಿ ನಿಂತು ತವರು ಮನೆಯ ಉಡುಗೊರೆಯಾಗಿ ಬಾಗಿನ ನೀಡಿ ಗೌರವಿಸಿ ಇಡೀ ಕುಟುಂಬವನ್ನು ಒಗ್ಗೂಡಿಸಿ ಸಂಭ್ರಮಿಸುವುದೇ ‘ಸುವರ್ಣ ಗೃಹಮಂತ್ರಿ’ ಕಾರ್ಯಕ್ರಮದ ಸಾರ್ಥಕತೆ.

ಇದೀಗ “ಸುವರ್ಣ ಗೃಹಮಂತ್ರಿ”ಯು ಯಶಸ್ವಿ 500 ಸಂಚಿಕೆಗಳನ್ನು ಪೂರೈಸುವ ಸಂಭ್ರಮದಲ್ಲಿದೆ. ಈ ಸಂಭ್ರಮವನ್ನು ಮತ್ತಷ್ಟು ಸಂಭ್ರಮಿಸಲು ಮೊಟ್ಟ ಮೊದಲ ಬಾರಿಗೆ ಜೊತೆಯಾಗಲಿದೆ ನಟ ರವಿ ಶಂಕರ್ ಗೌಡ ಅವರ ಕುಟುಂಬ. ಈ ಸ್ಪೆಷಲ್ ಎಪಿಸೋಡ್ ಅಲ್ಲಿ ನಟ ರವಿ ಶಂಕರ್ ತಮ್ಮದೇ ಮನೆಗೆ ಹೋಗಿ ತನ್ನ ಕುಟುಂಬದ ಜೊತೆ ಮಾತುಕತೆ ನಡೆಸಲಿದ್ದಾರೆ.

ಆಟ, ತುಂಟಾಟದ ಜೊತೆ ಮಸ್ತ್ ಮನರಂಜನೆಯನ್ನೊಳಗೊಂಡಿರುವ “ಸುವರ್ಣ ಗೃಹಮಂತ್ರಿ”ಯ 500ನೇ ಸಂಚಿಕೆ ಇದೇ ಅಕ್ಟೋಬರ್ 27 ರಂದು ಸಂಜೆ 5 ಗಂಟೆಗೆ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ ತಪ್ಪದೇ ವೀಕ್ಷಿಸಿ.

ಇದನ್ನು ಓದಿ : ರ್ಯಾಶ್ ಡ್ರೈವ್ ಮಾಡಿ ಅಮಾಯಕ ಮಹಿಳೆ ಕಾಲು ಮುರಿದ ದುರಹಂಕಾರಿ ದಿವ್ಯ ಸುರೇಶ್!

Btv Kannada
Author: Btv Kannada

Read More