ಬೆಂಗಳೂರು : ನಟಿ, ಮಾಜಿ ಬಿಗ್ ಬಾಸ್ ಸ್ಪರ್ಧಿ ದಿವ್ಯಾ ಸುರೇಶ್ ವಿರುದ್ಧ ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ಹಿಟ್ ಆಂಡ್ ರನ್ ಪ್ರಕರಣ ದಾಖಲಾಗಿದೆ. ದಿವ್ಯಾ ಸುರೇಶ್ ಕಾರಿನ ಡಿಕ್ಕಿ ರಭಸಕ್ಕೆ ಮಹಿಳೆಯೊಬ್ಬರ ಕಾಲು ಮುರಿದಿದೆ.

ಅ.4ರ ರಾತ್ರಿ ಸುಮಾರು 1.30 ಕ್ಕೆ ಅಪಘಾತ ಸಂಭವಿಸಿದ್ದು, ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ದಿವ್ಯಾ ಸುರೇಶ್ ರ್ಯಾಶ್ ಡ್ರೈವ್ನಿಂದ ಕಾರು ಬೈಕ್ಗೆ ಡಿಕ್ಕಿ ಹೊಡೆದಿದ್ದು, ಡಿಕ್ಕಿ ರಭಸಕ್ಕೆ ಮೂವರು ಬೈಕ್ನಿಂದ ಬಿದ್ದಿದ್ದಾರೆ. ಈ ಸಂಬಂಧ ಕಿರಣ್ ಎಂಬಾತ ಬ್ಯಾಟರಾಯನಪುರ ಸಂಚಾರಿ ಠಾಣೆಗೆ ದೂರು ನೀಡಿದ್ದಾರೆ.

ದೂರುದಾರ ಕಿರಣ್ ಸಂಬಂಧಿ ಅನುಷಾಗೆ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಬೈಕ್ನಲ್ಲಿ ಕಿರಣ್ ಹಾಗೂ ಸಂಬಂಧಿಗಳಾದ ಅನುಷಾ, ಅನಿತಾ ಆಸ್ಪತ್ರೆಗೆ ತೆರಳುತ್ತಿದ್ದರು. ಈ ವೇಳೆ ಬ್ಯಾಟರಾನಪುರದ ಎಂ.ಎಂ.ರಸ್ತೆ ಬಳಿ ನಾಯಿಗಳು ಬೊಗಳಿವೆ. ಭಯದಿಂದ ದೂರುದಾರ ಕಿರಣ್ ಬೈಕ್ನ್ನು ಸ್ವಲ್ಪ ಬಲಕ್ಕೆ ತೆಗೆದುಕೊಂಡಿದ್ರು. ಈ ವೇಳೆ ವೇಗವಾಗಿ ಬಂದ ದಿವ್ಯಾ ಸುರೇಶ್ ಕಾರು ಬೈಕ್ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕೆಳಗಡೆ ಬಿದ್ದಿದ್ದ ಅನಿತಾ ಕಾಲಿನ ಮಂಡಿ ಚಿಪ್ಪಿಗೆ ಪೆಟ್ಟಾಗಿತ್ತು. ಆದರೆ ದಿವ್ಯಾ ಸುರೇಶ್ ಗಾಯಾಳುಗಳನ್ನು ನೋಡದೇ ಕಾರು ನಿಲ್ಲಿಸದೇ ಎಸ್ಕೇಪ್ ಆಗಿದ್ದರು.

ನಂತರ ಗಾಯಳು ಅನಿತಾಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅ.7ರಂದು ಈ ಘಟನೆ ಸಂಬಂಧ ಬ್ಯಾಟರಾಯನಪುರ ಸಂಚಾರಿ ಠಾಣೆಗೆ ದೂರು ನೀಡಿದ್ದಾರೆ. ಬ್ಯಾಟರಾಯನಪುರ ಸಂಚಾರಿ ಪೊಲೀಸರು FIR ದಾಖಲಿಸಿ ತನಿಖೆ ಕೈಗೊಂಡಿದ್ದು, ಈ ವೇಳೆ ನಟಿ ದಿವ್ಯಾ ಸುರೇಶ್ ಕಾರ್ನಿಂದ ಅಪಘಾತ ನಡೆದಿರೋದು ಬೆಳಕಿಗೆ ಬಂದಿದೆ. ಬಳಿಕ ಸಿಸಿಟಿವಿ ಮೂಲಕ ಕಾರು ನಂಬರ್ ಟ್ರೇಸ್ ಮಾಡಿ ದಿವ್ಯಾ ಸುರೇಶ್ನ್ನು ಕರೆಸಿ, ಅವರ ಕಾರು ಪತ್ತೆ ಮಾಡಿ ಸೀಜ್ ಮಾಡಿದ್ದಾರೆ.

ನಂತರ ಪೊಲೀಸರು ಕಾನೂನು ಪ್ರಕಾರ ಕ್ರಮ ಕೈಗೊಂಡಿದ್ದು, ಸದ್ಯ ಬ್ಯಾಟರಾಯನಪುರ ಸಂಚಾರಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಗಾಯಳು ಅನಿತಾಗೆ ಬಿಜಿಎಸ್ ಆಸ್ಪತ್ರೆಯಲ್ಲಿ ಆಪರೇಷನ್ ಮಾಡಲಾಗಿದೆ. ಆಪರೇಷನ್ಗೆ ಎರಡು ಲಕ್ಷ ಹಣ ಖರ್ಚಾಗಿದ್ದು, ಇದುವರೆಗೂ ದಿವ್ಯಾ ಸುರೇಶ್ ಕರ್ಟಸಿಗಾಗಿಗೂ ಗಾಯಳು ಮಹಿಳೆಯನ್ನು ಸಂಪರ್ಕ ಮಾಡಿಲ್ಲ.

ಇದನ್ನೂ ಓದಿ : ಬಿಗ್ಬಾಸ್ನಲ್ಲಿ ‘S’ ಪದ ಬಳಕೆ – ದೊಡ್ಮನೆಯಿಂದ ಶೀಘ್ರವೇ ಅಶ್ವಿನಿ ಗೌಡ ಹೊರಕ್ಕೆ? ನಡೆಯಲಿದೆ ಪೊಲೀಸ್ ವಿಚಾರಣೆ!







