ಬೆಂಗಳೂರು : ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ ಸೀಸನ್ 12’ ಮತ್ತೊಂದು ವಿವಾದಕ್ಕೆ ಸಿಲುಕಿದ್ದು, ಸ್ಪರ್ಧಿ ಅಶ್ವಿನಿ ಗೌಡ ವಿರುದ್ಧ ಬಿಡದಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹೈಕೋರ್ಟ್ ವಕೀಲರಾದ ಪ್ರಶಾಂತ್ ಮೆತಲ್ ಅವರು ಈ ದೂರನ್ನು ಸಲ್ಲಿಸಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಸಹ ಸ್ಪರ್ಧಿ ರಕ್ಷಿತಾ ಶೆಟ್ಟಿ ವಿರುದ್ಧ ಅಶ್ವಿನಿ ಗೌಡ ಅವರು ‘ಎಸ್ ಕೆಟಗರಿ’ ಎಂಬ ಆಕ್ಷೇಪಾರ್ಹ ಪದವನ್ನು ಬಳಸಿ ವೈಯಕ್ತಿಕ ನಿಂದನೆ ಮಾಡಿದ್ದಾರೆ ಎಂದು ದೂರಿನಲ್ಲಿ ಹೇಳಿದ್ದಾರೆ.

ಬಿಗ್ ಬಾಸ್ ಸೀಸನ್ 12 ಕಂಟೆಸ್ಟೆಂಟ್ ಅಶ್ವಿನಿಗೌಡ ಜೊತೆಗೆ ಬಿಗ್ ಬಾಸ್ ಮುಖ್ಯಸ್ಥ ಪ್ರಶಾಂತ ನಾಯಕ್, ಶ್ರೀಮತಿ ಸುಷ್ಮಾ, ಪ್ರಕಾಶ್ ವಿರುದ್ದವೂ ಪ್ರಶಾಂತ್ ಮಿತ್ತಲ್ ದೂರು ದಾಖಲಿಸಿದ್ದಾರೆ. ಸ್ಪರ್ಧಿ ರಕ್ಷಿತಾ ಶೆಟ್ಟಿ ಅವರ ಬಗ್ಗೆ ಅಶ್ವಿನಿ ಗೌಡ ಅವರು ‘ಎಸ್ ಕೆಟಗರಿ’ ಎಂಬ ಪದ ಬಳಸಿ ನಿಂದಿಸಿದ್ದಾರೆ. ಈ ಪದ ಬಳಕೆ ವ್ಯಕ್ತಿ ನಿಂದನೆ ಮತ್ತು ಜಾತಿ ನಿಂದನೆಯ ಉದ್ದೇಶವನ್ನು ಹೊಂದಿದೆ ಎಂದು ದೂರಿನಲ್ಲಿ ಪ್ರಶಾಂತ್ ಮೆತಲ್ ಉಲ್ಲೇಖಿಸಿದ್ದಾರೆ.

ಈ ಸಂಬಂಧ ಬಿಡದಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಿಗ್ ಬಾಸ್‌ಗೆ ಈ ಹಿಂದೆಯೇ ಪರಿಸರ ನಿಯಮ ಉಲ್ಲಂಘನೆ ಆರೋಪದಡಿ ಸಂಕಷ್ಟ ಎದುರಾಗಿತ್ತು. ಈಗ ಸ್ಪರ್ಧಿಯ ವಿರುದ್ಧದ ಈ ದೂರು ಶೋಗೆ ಮತ್ತೊಂದು ವಿಘ್ನವನ್ನು ತಂದೊಡ್ಡಿದೆ.
ಇದನ್ನು ಓದಿ : ರಾಜ್ಯದ ಪೊಲೀಸ್ ಸಿಬ್ಬಂದಿಗಳಿಗೆ ಅ.28ಕ್ಕೆ ಪಿ-ಕ್ಯಾಪ್ ವಿತರಣೆ – ಸರ್ಕಾರ ಆದೇಶ!







