ಬೆಂಗಳೂರು : ಮಧ್ಯರಾತ್ರಿ ಮಾಟ, ಮಂತ್ರ, ಪ್ರೇತಾತ್ಮಗಳನ್ನ ಬಿಡಿಸುತ್ತಿದ್ದ ಶ್ರೀ ಶಕ್ತಿ ಶನೇಶ್ವರ ಮಹಾಸಂಸ್ಥಾನ ಮಠದ ಸ್ವಾಮೀಜಿ ವಿರುದ್ಧ FIR ದಾಖಲಾಗಿದೆ. ಸ್ವಾಮೀಜಿ ಮೇಲೆ ಬಿಬಿಎಂಪಿ ಜಾಗದಲ್ಲಿ ಅಕ್ರಮವಾಗಿ ಮಠ ಸ್ಥಾಪನೆ ಮಾಡಿದ್ದ ಆರೋಪ ಕೂಡ ಕೇಳಿಬಂದಿದೆ.

ಅಮವಾಸ್ಯೆ, ಹುಣ್ಣಿಮೆ ದಿನ ಮಧ್ಯರಾತ್ರಿಯಾಗುತ್ತಿದ್ದಂತೆ ಪೂಜೆ ಮಾಡ್ತಿದ್ದ. ಕೇಳಲು ಹೋದವರನ್ನ ನೀವು ರಕ್ತಕಾರಿ ಸಾಯ್ತಿರಾ ಎಂದು ಸ್ವಾಮೀಜಿ ಶಾಪ ಹಾಕಿ ಬೆದರಿಕೆ ಹಾಕ್ತಿದ್ದ. ರಾತ್ರಿಯಾದ್ರೆ ಸಾಕು ಲೌಡ್ ಸ್ಪೀಕರ್ ಹಾಕಿ ಮಾಟದ ಮಂತ್ರಗಳನ್ನ ಹೇಳ್ತಿದ್ದ. ಈ ಬಗ್ಗೆ ಪ್ರಶ್ನೆ ಮಾಡಿದರೆ ಅವರ ಮನೆಗೆ ಮಾಟ ಮಾಡಿಸಿ ಬಳೆ, ಲಿಂಬೆಹಣ್ಣು ಕುಂಕುಮ ಎರಚುತ್ತಿದ್ದ. ಈ ಬಗ್ಗೆ ಹಿಂದೆಯೂ ಹಲವು ಬಾರಿ ಸಾರ್ವಜನಿಕರು ಪೊಲೀಸರಿಗೆ ದೂರು ನೀಡಿದ್ದರು. ದೂರು ಬಂದಾಗ ಪೊಲೀಸರು ಲೌಡ್ ಸ್ಪೀಕರ್ ಕಿತ್ತು ಹಾಕಿದ್ದ. ಈ ಹಿನ್ನಲೆ ದೂರು ನೀಡಿದ್ದ ಪ್ರಮಿಳಾ ಎಂಬುವವರ ಮೇಲೆ ಸ್ವಾಮೀಜಿ ಸಿಟ್ಟಿಗೆದ್ದಿದ್ದ.

ಸ್ವಾಮೀಜಿ ಇನ್ಸ್ಟಾಗ್ರಾಮ್ನಲ್ಲಿ ಪ್ರಮಿಳಾ ಮಗನ ಭಾವಚಿತ್ರಕ್ಕೆ ಮಿಡ್ಲ್ ಫಿಂಗರ್ ತೋರಿಸಿ ಪೋಸ್ಟ್ ಮಾಡಿದ್ದ. ಅಲ್ಲದೇ ದೂರು ನೀಡಿದವರ ಮನೆಗೆ ಅತಿಕ್ರಮಣ ಪ್ರವೇಶ ಮಾಡಿ, ಪ್ರಮಿಳಾ ಹಾಗೂ ಆತನ ಮಗನ ಮೇಲೆ ಹಲ್ಲೆ ಮಾಡಿದ್ದ. ಈ ಹಿನ್ನಲೆ ಮಹಿಳೆ ಪೊಲೀಸ್ ಠಾಣೆಯಲ್ಲಿ ಮತ್ತೆ ದೂರು ದಾಖಲಿಸಿದ್ದು, ಸದ್ಯ ಘಟನೆ ಸಂಬಂಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಇದನ್ನೂ ಓದಿ : ಮೈಸೂರು ರೈಲ್ವೆ ನಿಲ್ದಾಣದಲ್ಲಿ ಮಗು ಕಿಡ್ನಾಪ್ – ಸಿಸಿ ಕ್ಯಾಮರಾ ದೃಶ್ಯ ಆಧರಿಸಿ ಆರೋಪಿ ಅರೆಸ್ಟ್!







