ಮಂಡ್ಯ : ಮಂಡ್ಯ ಜಿಲ್ಲೆಯಲ್ಲಿ ನಡೆದ ಭೀಕರ ಘಟನೆಯೊಂದರಲ್ಲಿ, ಪತ್ನಿಯ ಶೀಲದ ಬಗ್ಗೆ ಸಂಶಯ ಪಟ್ಟ ಗಂಡ ಆಕೆಯ ಕತ್ತು ಸೀಳಿ ಕ್ರೂರವಾಗಿ ಹತ್ಯೆ ಮಾಡಿದ್ದಾನೆ. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಶ್ವೇತಾ ಮೃತ ಮಹಿಳೆ. ಲೋಕೇಶ್ ಕೊಲೆ ಮಾಡಿದ ಪಾಪಿ ಪತಿ.

ಲೋಕೇಶ್ ಮತ್ತು ಶ್ವೇತಾ 17 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಲೋಕೇಶ್ ನಿತ್ಯ ಕಂಠಪೂರ್ತಿ ಕುಡಿದು ಮನೆಗೆ ಬಂದು ಜಗಳ ಮಾಡುತ್ತಿದ್ದ . ಮುಖ್ಯವಾಗಿ, ಆತ ತನ್ನ ಪತ್ನಿ ಶ್ವೇತಾ ಅವರ ಶೀಲ ಶಂಕಿಸಿ ನಿರಂತರವಾಗಿ ಹಿಂಸೆ ನೀಡುತ್ತಿದ್ದ ಎನ್ನಲಾಗ್ತಿದೆ. ಕೌಟುಂಬಿಕ ಕಲಹದ ನಡುವೆ, ಲೋಕೇಶ್ ತನ್ನ ಪತ್ನಿ ಶ್ವೇತಾಳ ಕತ್ತು ಸೀಳಿ ಭೀಕರವಾಗಿ ಹತ್ಯೆ ಮಾಡಿದ್ದಾನೆ. ಇನ್ನು ಕುಟುಂಬಸ್ಥರು ಆರೋಪಿಸಿರುವ ಪ್ರಕಾರ, ಕೊಲೆ ಮಾಡುವ ಮುನ್ನ ಆತ ಶ್ವೇತಾಗೆ ನಿದ್ರೆ ಮಾತ್ರೆಗಳನ್ನು ನೀಡಿ ಕೊಲೆ ಮಾಡಿರುವುದು ಗೊತ್ತಾಗಿದೆ.

ಘಟನೆಯ ಮಾಹಿತಿ ತಿಳಿದ ಕೂಡಲೇ ಮಂಡ್ಯ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಪತ್ನಿಯನ್ನು ಕೊಲೆಗೈದ ಆರೋಪಿ ಲೋಕೇಶ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಶ್ವೇತಾಳನ್ನು ಕೊಂದ ಆರೋಪಿ ಲೋಕೇಶ್‌ನ ಕೃತ್ಯಕ್ಕೆ ಆಕ್ರೋಶಗೊಂಡಿರುವ ಕುಟುಂಬಸ್ಥರು, ಆತನಿಗೆ ಕಠಿಣ ಶಿಕ್ಷೆ ವಿಧಿಸಬೇಕು ಮತ್ತು ಗಲ್ಲಿಗೇರಿಸಬೇಕು ಎಂದು ಆಗ್ರಹಿಸಿದ್ದಾರೆ. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇದನ್ನು ಓದಿ : ನೆಲಮಂಗಲದ ಗಂಗೊಂಡನಹಳ್ಳಿಯಲ್ಲಿ ಘೋರ ಕೃತ್ಯ: ಮದ್ಯದ ಮತ್ತಿನಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ, ಮೂವರು ಯುವಕರಿಂದ ಕೃತ್ಯ..!







