‘ದಿ ವೀರ್’ ಸಿನಿಮಾದ ಟೀಸರ್ ರಿಲೀಸ್ – ಆಕ್ಷನ್ ಮೂಡ್‌ನಲ್ಲಿ‌ ಜೆಕೆ!

ಬೆಂಗಳೂರು : ಕನ್ನಡ ಸಿನಿಮಾ ಮತ್ತು ಸೀರಿಯಲ್‌ಗಳಲ್ಲಿ ಜೆಕೆ ಎಂದೇ ಖ್ಯಾತಿ ಪಡೆದಿರುವ ಕಾರ್ತಿಕ್‌ ಜಯರಾಮ್‌ ನಟಿಸಿರುವ ದಿ ವೀರ್ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ರಾಜೇಶ್ವರಿ‌ ಪ್ರೊಡಕ್ಷನ್ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿರುವ ಝಲಕ್ ಕುತೂಹಲ ಹೆಚ್ಚಿಸಿದೆ. 2 ನಿಮಿಷ 44 ಸೆಕೆಂಡ್ ಇರುವ ದಿ ವೀರ್ ಟೀಸರ್ ಭರ್ಜರಿ ಆಕ್ಷನ್​ಗಳಿಂದ ಕೂಡಿದೆ. ನಿರ್ದೇಶಕರು ಎಲ್ಲಿಯೂ ಕಥೆಯ ಗುಟ್ಟು ಬಿಟ್ಟು ಕೊಡದೇ ಟೀಸರ್ ಕಟ್ ಮಾಡಿದ್ದಾರೆ. ಸಿಕ್ಸ್ ಪ್ಯಾಕ್ಸ್ ನಲ್ಲಿ ಜೆಕೆ ಸಖತ್ ಖದರ್ ತೋರಿಸಿದ್ದಾರೆ.

ಹೊಸ ನಿರ್ದೇಶಕ ಆರ್​. ಲೋಹಿತ್​ ನಾಯಕ್​ ಅವರು ‘ದಿ ವೀರ್​’ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕರ ಜೊತೆ ಕೆಲಸ ಮಾಡಿದ ಅನುಭವ ಅವರಿಗೆ ಇದೆ. ಜೆಕೆ ನಟಿಸಿದ್ದ ‘ಐರಾವನ್​’ ಸಿನಿಮಾದ ತಂಡದಲ್ಲೂ ಲೋಹಿತ್​ ಕೆಲಸ ಮಾಡಿದ್ದರು. ಈಗ ಅವರು ‘ದಿ ವೀರ್​’ ಚಿತ್ರಕ್ಕೆ ಆ್ಯಕ್ಷನ್​-ಕಟ್​ ಹೇಳುವ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ.

ಚಿತ್ರದಲ್ಲಿ ರೋಚಿತ್​ ಅವರು ವಿಲನ್​ ಅಭಿನಯಿಸಿದ್ದಾರೆ. ಮಂಜು ಪಾವಗಡ ಕೂಡ ನಟಿಸಿದ್ದಾರೆ. ಹೊಸ ನಟಿ ಪ್ರಣಿತಿ ಅವರು ಈ ಸಿನಿಮಾದ ಮೂಲಕ ನಾಯಕಿಯಾಗಿದ್ದಾರೆ.

ದಿ ವೀರ್ ಸಿನಿಮಾಗೆ ಧ್ರುವ ಎಂ.ಬಿ. ಅವರು ಸಂಗೀತ ನೀಡುತ್ತಿದ್ದಾರೆ. ದೇವೇಂದ್ರ ಛಾಯಾಗ್ರಹಣ, ಆರ್ಯನ್ ಗೌಡ ಸಂಕಲನ, ಶಂಕರ್ ರಾಮನ್ ಹಾಗೂ ನಾಗಾರ್ಜುನ್ ಪ್ರಕಾಶ್ ಸಂಭಾಷಣೆ ಒದಗಿಸಿದ್ದಾರೆ. ಜಯಶ್ರೀನಿವಾಸನ್ ಗುರೂಜಿ ಅವರ ಧರ್ಮಪತ್ನಿ ಗೀತಾ ಜಯಶ್ರೀನಿವಾಸನ್ ಮತ್ತು ವಿಶಾಲ್ ತೇಜ್ ದಿ ವೀರ್ ಚಿತ್ರ ನಿರ್ಮಾಣ ಮಾಡಿದ್ದಾರೆ.

ಇದನ್ನು ಓದಿ : ವರದಕ್ಷಿಣೆ, ನಿವೇಶನಕ್ಕಾಗಿ ಪತಿ ಕುಟುಂಬಸ್ಥರ ಕಿರಕುಳ ಆರೋಪ – ವಿಡಿಯೋ ಮಾಡಿಟ್ಟು ಗೃಹಿಣಿ ಆತ್ಮಹತ್ಯೆ!

Btv Kannada
Author: Btv Kannada

Read More