ಬೆಂಗಳೂರು : GT ಮಾಲ್​​ನ 3ನೇ ಫ್ಲೋರ್​​ನಿಂದ ಕೆಳಗೆ ಬಿದ್ದು ವ್ಯಕ್ತಿ ಆತ್ಮಹತ್ಯೆ!

ಬೆಂಗಳೂರು : ಬೆಂಗಳೂರಿನ ಮಾಗಡಿ ರಸ್ತೆ ವ್ಯಾಪ್ತಿಯಲ್ಲಿರುವ ಜಿಟಿ ಮಾಲ್​ನಲ್ಲಿ ವ್ಯಕ್ತಿಯೊಬ್ಬ 3ನೇ ಫ್ಲೋರ್​​ನಿಂದ ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.

ಕೆ.ಪಿ. ಅಗ್ರಹಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದ್ದು, ಮೃತನ ಬಳಿ ಆಧಾರ್, ಮೊಬೈಲ್ ಸೇರಿ ಯಾವುದೇ ತರಹದ ದಾಖಲೆಗಳಿಲ್ಲ. ಸದ್ಯ ಕೆ.ಪಿ. ಅಗ್ರಹಾರ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಸ್ಥಳಕ್ಕೆ ಕೆ.ಪಿ.ಅಗ್ರಹಾರ ಠಾಣಾ ಪೊಲೀಸರು & ಸೋಕೋ ಟೀಂ ಭೇಟಿ ನೀಡಿ, ಪರೀಶಿಲನೆ ನಡೆಸಿದ್ದಾರೆ. ಪೊಲೀಸರು ಸೂಸೈಡ್ ಸಂಬಂಧ ವ್ಯಕ್ತಿ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.

ಇದನ್ನು ಓದಿ :‘ಫ್ಲರ್ಟ್’ ಚಿತ್ರದ ಟ್ರೈಲರ್ ರಿಲೀಸ್ – ನಟ ಚಂದನ್ ಕುಮಾರ್ ಚೊಚ್ಚಲ ನಿದೇಶನದ ಸಿನಿಮಾಗೆ ಕಿಚ್ಚ ಸಾಥ್!

Btv Kannada
Author: Btv Kannada

Read More