ಮೈಸೂರಿನಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರು ನೀರು ಪಾಲು!

ಮೈಸೂರು : ಕೆರೆಯಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರು ನೀರುಪಾಲಾಗಿರುವ ಘಟನೆ ಮೈಸೂರಿನ ನಂಜನಗೂಡು ತಾಲೂಕಿನ ಬದನವಾಳು ಗ್ರಾಮದಲ್ಲಿ ನಡೆದಿದೆ. ಮೃತ ದುರ್ದೈವಿಗಳನ್ನು ಬದನವಾಳು ಗ್ರಾಮದ 8 ವರ್ಷದ ಮೋಹಿತ್ ಮತ್ತು 9 ವರ್ಷದ ಆರ್ಯ ಎಂದು ಗುರುತಿಸಲಾಗಿದೆ.

ದಸರಾ ರಜೆ ಹಿನ್ನೆಲೆಯಲ್ಲಿ ಈ ಇಬ್ಬರು ಮಕ್ಕಳು ಇಂದು ಮಧ್ಯಾಹ್ನ ಗ್ರಾಮದ ಕೆರೆಗೆ ಸೈಕಲ್‌ನಲ್ಲಿ ತೆರಳಿದ್ದರು. ಕೆರೆಯಲ್ಲಿ ಈಜಲು ಇಳಿದಾಗ ಸುಳಿಗೆ ಸಿಲುಕಿ ಸಾವನ್ನಪ್ಪಿದ್ದಾರೆ. ಮೋಹಿತ್ 3ನೇ ತರಗತಿ ಹಾಗೂ ಆರ್ಯ 4ನೇ ತರಗತಿ ವಿದ್ಯಾರ್ಥಿಗಳಾಗಿದ್ದರು.

ಘಟನಾ ಸ್ಥಳಕ್ಕೆ ಕವಲಂದೆ ಠಾಣೆಯ PSI ಬಸವರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಕ್ಕಳ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಕುರಿತು ಕವಲಂದೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನು ಓದಿ : 40% ಕಮಿಷನ್ ಆರೋಪದ ಬಳಿಕ ಡಿಸಿಎಂ ಡಿಕೆಶಿ ಭೇಟಿ – ಕಾಮಗಾರಿಗಳ ಬಿಲ್ ಸೇರಿ ಹಲವು ವಿಚಾರಗಳ ಬಗ್ಗೆ ಕಂಟ್ರಾಕ್ಟರ್ಸ್​ ಚರ್ಚೆ!

Btv Kannada
Author: Btv Kannada

Read More