ವಿದ್ಯಾರ್ಥಿನಿ ಯಾಮಿನಿ ಪ್ರಿಯಾ ಕೊಲೆ ಕೇಸ್ – ಆರೋಪಿ ವಿಘ್ನೇಶ್ ಸೇರಿ ಇಬ್ಬರು ಅರೆಸ್ಟ್!

ಬೆಂಗಳೂರು : ಮಲ್ಲೇಶ್ವರಂನಲ್ಲಿ ನಡೆದ ವಿದ್ಯಾರ್ಥಿನಿ ಯಾಮಿನಿ ಪ್ರಿಯಾ ಕೊಲೆ ಪ್ರಕರಣದ ಇಬ್ಬರು ಆರೋಪಿಗಳನ್ನು ಶ್ರೀರಾಂಪುರ ಪೊಲೀಸರು ಬಂಧಿಸಿದ್ದಾರೆ. ವಿಘ್ನೇಶ್, ಹರೀಶ್ ಬಂಧಿತ ಆರೋಪಿಗಳು.

ವಿಘ್ನೇಶ್
             ವಿಘ್ನೇಶ್

ವಿಘ್ನೇಶ್‌ ಜೊತೆ ಆತನಿಗೆ ಆಶ್ರಯ ನೀಡಿದ್ದ ಸ್ನೇಹಿತ ಹರೀಶ್ ಎಂಬಾತನನ್ನೂ ಪೊಲೀಸರು ಬಂಧಿಸಿದ್ದಾರೆ. ಕೊಲೆ ಕೃತ್ಯ ನಡೆದ ನಂತರ ಪ್ರಮುಖ ಆರೋಪಿ ವಿಘ್ನೇಶ್, ತನ್ನ ಸ್ನೇಹಿತ ಹರೀಶ್‌ನ ಸಹಾಯ ಪಡೆದು ಬೈಕ್‌ನಲ್ಲಿ ಪರಾರಿಯಾಗಿದ್ದನು. ಹರೀಶ್ ವಿಘ್ನೇಶ್‌ಗೆ ಸೋಲದೇವನಹಳ್ಳಿ ಕಡೆಗೆ ಕರೆದುಕೊಂಡು ಹೋಗಿ, ಅಲ್ಲಿನ ಮನೆಯೊಂದರಲ್ಲಿ ಅಡಗಲು ಸಹಾಯ ಮಾಡಿದ್ದನು. ಪ್ರಕರಣದ ಗಂಭೀರತೆ ಅರಿತ ಶ್ರೀರಾಂಪುರ ಪೊಲೀಸರು ರಾತ್ರಿಯಿಡೀ ತೀವ್ರ ಕಾರ್ಯಾಚರಣೆ ನಡೆಸಿ, ಸೋಲದೇವನಹಳ್ಳಿಯಲ್ಲಿ ಅವಿತಿದ್ದ ಇಬ್ಬರೂ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.

ಸದ್ಯ ಬಂಧಿಸಿರುವ ಆರೋಪಿಗಳನ್ನು ಪೊಲೀಸರು ಹೆಚ್ಚಿನ ವಿಚಾರಣೆಗೊಳಪಡಿಸಿದ್ದು, ಕೊಲೆಗೆ ನಿಖರ ಕಾರಣ ಏನು ಎಂಬ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ. ಕೊಲೆಯಾದ ವಿದ್ಯಾರ್ಥಿನಿ ಯಾಮಿನಿ ಪ್ರಿಯಾ ಮತ್ತು ಆರೋಪಿ ವಿಘ್ನೇಶ್‌ ನಡುವಿನ ಸಂಬಂಧದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಇದನ್ನು ಓದಿ : ನೋಟಿಗೆ ಕೋಟಾ ನೋಟು ಆಫರ್ ಮಾಡಿ ಜನರಿಗೆ ವಂಚನೆ – ತಿರುನೆಲ್ವೇಳಿಯ ಗ್ಯಾಂಗ್ ಅರೆಸ್ಟ್!

 

Btv Kannada
Author: Btv Kannada

Read More