ಸ್ಲಂ ಬೋರ್ಡ್​ನಲ್ಲಿ 40 ಪರ್ಸೆಂಟ್ ವಸೂಲಿ – ಬಾಲರಾಜ್ ವಿರುದ್ಧ ಭುಗಿಲೆದ್ದ ಕಂಟ್ರಾಕ್ಟರ್ಸ್​!

ಬೆಂಗಳೂರು : ಸ್ಲಂ ಬೋರ್ಡಿನಲ್ಲೇ ಮೂವತ್ತು ವರ್ಷ ಕೋಟಿ ಕೋಟಿ ಲೂಟಿ ಮಾಡಿ ಇದೀಗ ರಿಟೈಯರ್ಡ್ ಮೆಂಟ್ ವಯಸ್ಸಲ್ಲೂ ಬಾಲರಾಜ್ ಸ್ಲಂ ಬೋರ್ಡ್ ನಲ್ಲಿ ಮತ್ತೆ ಕಾಂಟ್ರ್ಯಾಕ್ಟರ್​​ಗಳಿಂದ ಸುಲಿಗೆ ಮಾಡ್ತಿದ್ದಾನೆ. ಇದೀಗ ಸ್ಲಂ ಬೋರ್ಡ್​ನ ‘ವಸೂಲಿ’ ಕಿಂಗ್ ಬಾಲರಾಜ್ ವಿರುದ್ಧ ಕಂಟ್ರಾಕ್ಟರ್ಸ್​ ಭುಗಿಲೆದ್ದಿದ್ದಾರೆ.

ನಿವೃತ್ತ ಎಂಜಿನಿಯರ್ & ಹಾಲಿ ಟೆಕ್ನಿಕಲ್ ಅಡ್ವೈಸರ್ ಆಗಿರುವ ಬಾಲರಾಜ್ ಸ್ಲಂ ಬೋರ್ಡ್​ನಲ್ಲಿ 40 ಪರ್ಸೆಂಟ್ ಕಮಿಷನ್​ ವಸೂಲಿ ಮಾಡ್ತಿದ್ದಾನೆ. ಬಡವರಿಗೆ ಅಂತಾ ಕಟ್ಟೋ ಮನೆಗಳನ್ನೂ ಬಿಡದೇ ಶೇ 40ರಷ್ಟು ವಸೂಲಿ ದಂಧೆ ನಡೆಸುತ್ತಿದ್ದು, ಅದರಲ್ಲಿ ಶೇ 40 ಕಮಿಷನ್​ನಲ್ಲಿ 20 ಪರ್ಸೆಂಟ್ ದೊಡ್ಡವರಿಗೆ, 20 ಪರ್ಸೆಂಟ್ ಬಾಲರಾಜ್​ಗೆ ಸಂದಾಯ ಆಗ್ತಿದೆ.

ರಾಜಾರೋಷವಾಗಿ 40 ಪರ್ಸೆಂಟ್ ಕಮಿಷನ್ ವಸೂಲಿ ಮಾಡ್ತಿರುವ ಬಾಲರಾಜ್ ಮೇಲೆ ಬರೋಬ್ಬರಿ 1,000 ಸಾವಿರಕ್ಕೂ ಹೆಚ್ಚು ಕಂಪ್ಲೇಟ್​​ಗಳಿವೆ. ಬಾಲರಾಜ್ ಮೇಲೆ ಲೋಕಾಯುಕ್ತ ಪೊಲೀಸರೂ ರೇಡ್ ಮಾಡಿದ್ದಾರೆ. ಇಷ್ಟೆಲ್ಲಾ ಆದ್ರೂನೂ ಬಾಲರಾಜ್​ನನ್ನು ಅಲುಗಾಡಿಸಲು ಆಗ್ತಿಲ್ಲ. ರಿಟೈರ್ಡ್ ಆಗಿ 1.5 ವರ್ಷ ಆದ್ರೂ ಸ್ಲಂ ಬೋರ್ಡ್​ನಲ್ಲೇ ಬಾಲರಾಜ್ ಠಿಕಾಣಿ ಹೂಡಿದ್ದು, ಸ್ಲಂ ಬೋರ್ಡ್​ನ ಹಾಲಿ ಟೆಕ್ನಿಕಲ್ ಅಡ್ವೈಸರ್ ಆಗಿ ಬಾಲರಾಜ್ ಕಾರ್ಯ ನಿರ್ವಹಿಸುತ್ತಿದ್ದಾನೆ.

ಟೆಕ್ನಿಕಲ್ ಅಡ್ವೈಸರ್ ಭ್ರಷ್ಟ ಬಾಲರಾಜ್ ಕಂಟ್ರಾಕ್ಟರ್ಸ್​ಗಳಿಗೆ ಹಿಂಸೆ ಕೊಡ್ತಿದ್ದು, ಈತ ನಕಲಿ ಬಿಲ್​ಗಳನ್ನು ಬರೆಯೋರಿಗೆ ಮಾತ್ರ ಕಾಂಟ್ರ್ಯಾಕ್ಟ್ ಕೊಡ್ತಾನೆ. ಇವತ್ತು ಕಂಟ್ರಾಕ್ಟರ್ಸ್ ಸಂಘ ಬಾಲರಾಜ್ ವಿರುದ್ಧ ಬಹಿರಂಗವಾಗಿ ಕಿಡಿಕಾಡಿದ್ದು, ಸುದ್ದಿಗೋಷ್ಠಿ ನಡೆಸಿ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್ ಆಕ್ರೋಶ ಹೊರಹಾಕಿದ್ದಾರೆ.

‘ವಸೂಲಿ’ ಕಿಂಗ್ ಬಾಲರಾಜ್ ಕಿತ್ತಾಕಿ ಅಂದ್ರೂ ಸಚಿವ ಜಮೀರ್ ತೆಗೆದು ಹಾಕ್ತಿಲ್ಲ. ದೂರು ಕೊಟ್ರೂ ಸಚಿವ ಜಮೀರ್ ಅಹಮ್ಮದ್ ಖಾನ್ ಕರೆಂಗೆ, ತೆಗೆಂಗೆ ಅಂತಾರೆ.
ಸಿಎಂ ಸಿದ್ದರಾಮಯ್ಯನವರೇ ಈ ಭ್ರಷ್ಟ ಬಾಲರಾಜ್​ನ FIR ಮಾಡಿ ಅರೆಸ್ಟ್ ಮಾಡಿಸಿ, ಇದುವೆರಗೂ ‘ವಸೂಲಿ’ ಕಿಂಗ್ ಬಾಲರಾಜ್ 2,300 ಕೋಟಿ ಪೇಪೆಂಟ್ ಮಾಡಿದ್ದಾನೆ.
ಶೇ 40 ರಷ್ಟು ಅಂತಾ ಲೆಕ್ಕ ಹಾಕಿದ್ರೂ ಸಾವಿರಾರು ಕೋಟಿ ರೂಪಾಯಿ ವಸೂಲಿ ಮಾಡಿದ್ದಾನೆ. ಬಡವರನ್ನೂ ಬಿಡದೇ, ಯಾರ್ಯಾರ ಹೆಸರಲ್ಲಿ ಸುಲಿಗೆ ಮಾಡಿದ್ದಾನೆ ತನಿಖೆ ಮಾಡಿಸಿ, ಈಗಲೇ ಲೋಕಾಯುಕ್ತ ಅಧಿಕಾರಿಗಳಿಂದ ರೇಡ್ ಮಾಡಿಸಿ, ವಸೂಲಿ ಹಣ ಬಿಚ್ಚಿಡಿ. ರಿಟೈರ್ಡ್ ಆದ್ರುನೂ ಬಾಲರಾಜ್​ನನ್ನು ಮುಟ್ಟುವ ಧೈರ್ಯ ಯಾರೂ ಮಾಡ್ತಿಲ್ಲ, ಸ್ಲಂಬೋರ್ಡ್​ ಟೆಕ್ನಿಕಲ್ ಅಡ್ವೈಸರ್ ಬಾಲರಾಜ್ ಕಲೆಕ್ಷನ್ ಕಿಂಗ್ ಆಗಿದ್ದಾನೆ. ಸಚಿವ ಜಮೀರ್ ಅವರೇ ಈ ಭ್ರಷ್ಟ ಬಾಲರಾಜ್​ನನ್ನು ಯಾಕೆ ಸಮರ್ಥನೆ ಮಾಡ್ಕೊತ್ತಿರಾ? ಜಮೀರ್ ಅವರೇ ಈಗಲೇ ‘ವಸೂಲಿ’ ಕಿಂಗ್ ಬಾಲರಾಜ್ ಕಿತ್ತಾಕಿ, ಕಂಟ್ರಾಕ್ಟರ್ಸ್​ ಉಳಿಸಿ.

ಇದನ್ನೂ ಓದಿ : ಚಂದ್ರಮೌಳಿ-ರಾಮ್ ಹೊಸ ಸಾಹಸ ‘ದಿಲ್ಮಾರ್’ಗೆ ಶಿವಣ್ಣ ಸಾಥ್ – ಇದೇ 24ಕ್ಕೆ ಸಿನಿಮಾ ತೆರೆಗೆ!

Btv Kannada
Author: Btv Kannada

Read More