ಮಂಡ್ಯ : ಸಿಡಿಎಸ್ ನಾಲೆಗೆ ಕಾರ್ಖಾನೆಯ ತ್ಯಾಜ್ಯ ನೀರು ಬಿಟ್ಟು ನಿರಾಣಿ ಶುಗರ್ಸ್ ಎಡವಟ್ಟು ಮಾಡಿದೆ. ಕಾರ್ಖಾನೆಯ ಕೆಮಿಕಲ್ ಮಿಶ್ರಿತ ನೀರಿನಿಂದ ನಾಲೆಯ ನೀರು ದುರ್ಗಂಧವಾಗಿದ್ದು, ಇದೇ ನೀರು ಬಳಸಿ ಕೃಷಿ ಮಾಡ್ತಿರೋ ರೈತರಿಗೆ ಹಲವು ಆರೋಗ್ಯ ಸಮಸ್ಯೆ ಉಂಟಾಗಿದೆ.

ನಿರಾಣಿ ಶುಗರ್ಸ್ ಕಾರ್ಖಾನೆ ಪಾಂಡವಪುರ ರೈಲ್ವೆ ನಿಲ್ದಾಣದ ಬಳಿ ಇದ್ದು, ಈ ಹಿಂದೆ ಇದು PSSK ಕಾರ್ಖಾನೆ ಎಂದು ಸಾಕಷ್ಟು ಪ್ರಸಿದ್ದಿಯಾಗಿತ್ತು. ನಷ್ಟದ ಕಾರಣದಿಂದ 2015ರಲ್ಲಿ ಸಹಕಾರಿ ಕ್ಷೇತ್ರದ ಈ ಕಾರ್ಖಾನೆ ಮುಚ್ಚಲಾಗಿತ್ತು. 2019ರಲ್ಲಿ ಈ ಕಾರ್ಖಾನೆಯನ್ನು 40 ವರ್ಷದ ಅವಧಿಗೆ ನಿರಾಣಿ ಶುಗರ್ಸ್ ಕಂಪನಿಗೆ ಗುತ್ತಿಗೆ ಕೊಟ್ಟಿತ್ತು. ಗುತ್ತಿಗೆ ಬಳಿಕ ಈ ಕಾರ್ಖಾನೆ ನಿರಾಣಿ ಶುಗರ್ಸ್ ಹೆಸರಲ್ಲಿ ಆರಂಭವಾಗಿದೆ.

ಕಾರ್ಖಾನೆ ಆರಂಭವಾದ ಬಳಿಕ ಸಿಡಿಎಸ್ ನಾಲೆಗೆ ಕಾರ್ಖಾನೆ ತ್ಯಾಜ್ಯ ಬಿಟ್ಟಿದ್ದಾರೆ. ಈ ಸಮಸ್ಯೆಯಿಂದ ರೈತರು ಮತ್ತು ಜನರು ಕಂಗಾಲಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಕಾರ್ಖಾನೆಯ ಎಡವಟ್ಟು ಬಯಲಾಗಿದ್ದು, ಇದೀಗ ಈ ಕಾರ್ಖಾನೆಯ ವಿರುದ್ದ ಸಾರ್ವಜನಿಕರು ಮತ್ತು ರೈತರು ಆಕ್ರೋಶ ಹೊರ ಹಾಕಿದ್ದಾರೆ.
ಇದನ್ನೂ ಓದಿ : ಸಿಎಂ ಡಿನ್ನರ್ ಪಾರ್ಟಿಗೆ “ಕೇಸರಿ” ಟಕ್ಕರ್.. 300 ರೂ. ಊಟ ಕೊಟ್ಟು 300 ಕೋಟಿ ವಸೂಲಿ – ಆರ್. ಅಶೋಕ್!







