ಬೆಂಗಳೂರು : ಸೈಟ್ ಕೊಡಿಸೋದಾಗಿ ಸ್ಯಾಂಡಲ್ವುಡ್ನ ಹಿರುತೆರೆ, ಕಿರುತೆರೆ ನಟ-ನಟಿಯರಿಗೆ ಬೆಂಗಳೂರಿನ ASB ಡೆವಲಪರ್ಸ್ ಕಂಪನಿ ಕೋಟಿ ಕೋಟಿ ವಂಚನೆ ಮಾಡಿದೆ. ಭಾರೀ ವಂಚನೆ ಸಂಬಂಧ ಇದೀಗ ASB ಡೆವಲಪರ್ಸ್ ವಿರುದ್ಧ ಪ್ರಕರಣ ದಾಖಲಾಗಿದೆ.

ಬೆಂಗಳೂರಿನ ASB ಡೆವಲಪರ್ಸ್ ಕಂಪನಿ ನಿವೇಶನ ಕೊಡಿಸುವುದಾಗಿ ಸುಮಾರು 139 ನಟ-ನಟಿಯರಿಗೆ ಪಂಗನಾಮ ಹಾಕಿದ್ದಾರೆ. ನಟ, ನಟಿ, ಕಿರಿತೆರೆ ಆ್ಯಕ್ಟರ್ಸ್ಗೆಲ್ಲಾ ASB ಡೆವಲಪರ್ಸ್ ನಂಬಿಸಿ ಮೋಸ ಮಾಡಿದ್ದು, ಭಗೀರಥ, ವಿಜಯ್ ಕುಮಾರ್ ನೂರಾರು ಕೋಟಿ ರೂ. ಪಡೆದು ವಂಚಿಸಿದ್ದಾರೆ. ಚೇರ್ಮೆನ್ ಭಗೀರಥ, MD ವಿಜಯ್ ಕುಮಾರ್ ಮೇಲೆ BNS (U/S 318(4), 336(2), 336(3),340(2),61(2),R/W3(5) ಸೆಕ್ಷನ್ ಅಡಿಯಲ್ಲಿ ಕೇಸ್ ದಾಖಲಾಗಿದೆ.

ಖ್ಯಾತ ಪತ್ರಕರ್ತ ರವಿ ಬೆಳೆಗೆರೆ ಪುತ್ರಿ ಭಾವನಾ ಬೆಳಗೆರೆ ದಂಪತಿಗೂ ಸೈಟ್ ಹೆಸರಲ್ಲಿ ಮೋಸ ಮಾಡಿದ್ದಾರೆ. ಈ ಸಂಬಂಧ ಭಗೀರಥ, ವಿಜಯ್ ಕುಮಾರ್ ವಿರುದ್ಧ ಶ್ರೀ ನಗರ ಕಿಟ್ಟಿ ಪತ್ನಿ ಭಾವನಾ ಬೆಳಗೆರೆ ದೂರು ನೀಡಿದ್ದಾರೆ. ಭಾವನಾ ಬೆಳಗೆರೆ ನೀಡಿದ ದೂರಿನ ಹಿನ್ನೆಲೆ ಇಬ್ಬರ ಮೇಲೆ FIR ದಾಖಲಾಗಿದೆ. ವಂಚನೆ ಆರೋಪದಲ್ಲಿ 10ಕ್ಕಿಂತ ಹೆಚ್ಚು ಪ್ರಕರಣಗಳು ದಾಖಲಾದ್ರು ASB ಡೆವಲಪರ್ಸ್ ಚೇರ್ಮೆನ್ ಭಗೀರಥ, MD ವಿಜಯ್ ಕುಮಾರ್ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ.

ಡೆವಲಪರ್ಸ್ ಚೇರ್ಮೆನ್ ಭಗೀರಥ, MD ವಿಜಯ್ ಕುಮಾರ್ ವಿರುದ್ಧ ಜಸ್ಟ್ ಒಂದೇ ಕೇಸಲ್ಲಿ ಬರೋಬ್ಬರಿಗೆ 1.6 ಕೋಟಿ ಹಣ ವಂಚಿಸಲಾಗಿದೆ ಎಂದು ದೂರು ದಾಖಲಾಗಿದೆ. ಸಾಲು ಸಾಲು ದೂರುಗಳು ದಾಖಲಾದ್ರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ರಾಜಕಾರಣಿಯೊಬ್ಬರ ಕೃಪಾಕಟಾಕ್ಷದಿಂದಾಗಿ ಚೇರ್ಮೆನ್ ಭಗೀರಥ, MD ವಿಜಯ್ ಕುಮಾರ್ನ್ನು ಪೊಲೀಸರು ಅರೆಸ್ಟ್ ಮಾಡ್ತಿಲ್ಲ. ASB ಡೆವಲಪರ್ಸ್ ಚೇರ್ಮೆನ್ & MD 139 ನಟನಟಿಯರು, ನೂರಾರು ಸಾರ್ವಜನಿಕರಿಗೆ ASB ಡೆವಲಪರ್ಸ್ ಪಂಗನಾಮ ಹಾಕಿದ್ದಾರೆ.

ASB ಡೆವಲಪರ್ಸ್ ಲೂಟಿ ಮಾಡಿದ ಹಣದಲ್ಲಿ ಪ್ರಭಾವಿ ರಾಜಕಾರಣಿಯೊಬ್ಬನಿಗೆ ಪಾಲು ಕೂಡ ಇದೆ. ಹಾಗಾಗಿ ASB ಚೇರ್ಮೆನ್ ಭಗೀರಥ, MD ವಿಜಯ್ ಕುಮಾರ್ ಬಂಧಿಸದಂತೆ ಪೊಲೀಸರಿಗೆ ರಾಜಕಾರಣಿ ಒತ್ತಡ ಹೇರಿದ್ದಾರೆ. ಆರ್ಆರ್ ನಗರ ಪೊಲೀಸ್ ಠಾಣೆಯೊಂದರಲ್ಲೇ ASB ವಿಜಯ್ ಕುಮಾರ್ ವಿರುದ್ದ 5 ಕ್ಕೂ ಕೇಸ್ ದಾಖಲಾಗಿದೆ. ರಾಜಕಾರಣಿ ಕೃಪಾಕಟಾಕ್ಷದಿಂದ ಭಗೀರಥ, ವಿಜಯ್ಕುಮಾರ್ ವಂಚನೆಯಲ್ಲೇ ಬದುಕ್ತಿದ್ದಾರೆ. ವಂಚಕರು ಪೊಲೀಸರಿಗೂ ಕೋಟಿ ಕೋಟಿ ಮಾಮೂಲು ನೀಡ್ತಿದ್ದಾರೆ.



ಇದನ್ನೂ ಓದಿ : ದೀಪಾವಳಿ ಹಬ್ಬಕ್ಕೂ ಮೊದಲೇ ಪಟಾಕಿ ಸಂಗ್ರಹ – ಗೋಡೌನ್ ಮೇಲೆ ಕುಂಬಳಗೋಡು ಪೊಲೀಸರು ದಾಳಿ.. ಓರ್ವ ಅರೆಸ್ಟ್!







