ಬೆಂಗಳೂರು : ಕಾಲೇಜು ಕಟ್ಟಡದಿಂದ ಹಾರಿ ವಿದ್ಯಾರ್ಥಿ ಆತ್ಮಹತ್ಯೆ!

ಬೆಂಗಳೂರು : ಕಾಲೇಜು ಕಟ್ಟಡದಿಂದ ಹಾರಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪುಲಿಕೇಶಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. 17 ವರ್ಷದ ಆರ್ಯನ್ ಮೋಸಸ್ ಮೃತ ವಿದ್ಯಾರ್ಥಿ.


ಕ್ಲಾರೆನ್ಸ್ ಕಾಲೇಜಿನಲ್ಲಿ‌ ದ್ವಿತೀಯ ಪಿಯುಸಿ ವ್ಯಾಸಂಗ ಮಾಡ್ತಿದ್ದ ಆರ್ಯನ್ ಕಟ್ಟಡದಿಂದ ಜಿಗಿದಿದ್ದು, ತಕ್ಷಣ ಕಾಲೇಜು ಮಂಡಳಿ ಆತನನ್ನು ಆಸ್ಪತ್ರೆಗೆ ಸಾಗಿಸಿದೆ. ಆದರೆ
ಆಸ್ಪತ್ರೆ ಸಾಗಿಸೋವಾಗ ಮಾರ್ಗಮಧ್ಯೆಯೇ ಆರ್ಯನ್ ಮೃತಪಟ್ಟಿದ್ದಾನೆ. ಆರ್ಯನ್ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಸದ್ಯ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹ ಪೋಷಕರಿಗೆ ಹಸ್ತಾಂತರ ಮಾಡಲಾಗಿದೆ. ಈ ಸಂಬಂಧ ಪುಲಿಕೇಶಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರ್ಯನ್ ಮೋಸಸ್ ಸಾವಿನ ಬಗ್ಗೆ ಪೊಲೀಸರಿಂದ ತನಿಖೆ ಮುಂದುವರೆದಿದೆ.

ಇದನ್ನೂ ಓದಿ : ಮಾರಿಷಸ್​​ನ​ಲ್ಲಿ ಜೆಎಸ್‌ಎಸ್​ನಿಂದ ಮೆಡಿಕಲ್ ಕಾಲೇಜು ಆರಂಭ.. ನವೆಂಬರ್​ನಲ್ಲಿ ಶೈಕ್ಷಣಿಕ ಚಟುವಟಿಕೆ ಶುರು!

Btv Kannada
Author: Btv Kannada

Read More