ಅಬಕಾರಿ ಇಲಾಖೆಯಲ್ಲಿ 100 ಕೋಟಿ ಸಿಎಲ್​ 7 ಲೈಸೆನ್ಸ್​ ಹಗರಣ – ಜೈಲು ಸೇರ್ತಾರೆ 20ಕ್ಕೂ ಹೆಚ್ಚು ಅಧಿಕಾರಿಗಳು?

ಬೆಂಗಳೂರು : ಯಾರದ್ದೋ ಲೈಸೆನ್ಸ್, ಯಾರದ್ದೋ ಬ್ಲೂ ಪ್ರಿಂಟ್, ಇನ್ಯಾರದ್ದೋ ಬಿಬಿಎಂಪಿ ಲೈಸೆನ್ಸ್ ಇದು ಕರ್ನಾಟಕವೇ ಬೆಚ್ಚಿ ಬೀಳೋ ಅಬಕಾರಿ ಅರ್ಥಾತ್ ಎಕ್ಸೈಸ್ ಹಗರಣ. ಬೆಂಗಳೂರಿನ ಬಾರ್ಡರ್​ನಲ್ಲಿರೋ ಕೆ.ಆರ್ ಪುರಂ ಆಸುಪಾಸಿನ ಭಾಗದಲ್ಲಿ ನಕಲಿ ಬಾರ್ ಲೈಸೆನ್ಸ್​ಗಳು ನೆಗೆದಾಡ್ತಿದ್ದಾವೆ. ಅಬಕಾರಿ ಅಧಿಕಾರಿಗಳೇ ಸಿಎಲ್ 2, ಸಿಎಲ್ 9, ಸಿಎಲ್ 7 ನಕಲಿ ಪರವಾನಿಗೆ ನೀಡಿದ್ದು, ಅದೇ ರೀತಿ ಕೋಟಿ ಲಂಚ ಕೊಟ್ಟು ದಾಖಲೆಗಳನ್ನ ಬಿಟ್ಟು ವೈನ್ ಶಾಪ್, ಬಾರ್ ಆಂಡ್ ರೆಸ್ಟೋರೆಂಟ್ ಹಾಗೂ ಬೋರ್ಡಿಂಗ್ ಆಂಡ್ ಲಾಡ್ಜಿಂಗ್​​ನ ನಕಲೀ ಸನ್ನದುದಾರರ ಕೈಗೆ ಇದೀಗ ಬೇಡಿ ಬೀಳೋದು ಗ್ಯಾರಂಟಿ.

ಹೌದು.. ಇದು ದೇಶವೇ ಬೆಚ್ಚಿ ಬೀಳುವ ರಾಜ್ಯದ ಅತೀ ದೊಡ್ಡ ಅಬಕಾರಿ ಹಗರಣವಾಗಿದ್ದು, ದೆಹಲಿ ಎಕ್ಸೈಸ್​ ಹಗರಣವನ್ನೂ ಮೀರಿಸುವ ಅಬಕಾರಿ ಸ್ಕ್ಯಾಮ್​ ಇದಾಗಿದೆ. ನೂರು ಕೋಟಿಯ ಸಿಎಲ್​ 7 ಲೈಸೆನ್ಸ್​ ಹಗರಣ ಮಾಡಿರುವ 20 ಕ್ಕೂ ಹೆಚ್ಚು ಅಧಿಕಾರಿಗಳು ಇದೀಗ ಜೈಲು ಸೇರ್ತಾರೆ ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ. ಕರ್ನಾಟಕದ ಅಬಕಾರಿ ಹಗರಣ ಬಯಲಾಗಿದ್ದು, ಅಬಕಾರಿ ಅಧಿಕಾರಿಗಳೇ ಜೈಲಿಗೆ ಹೋಗಲು ಸಿದ್ದರಾಗಿ. ದೆಹಲಿಯಲ್ಲಿ ಅಬಕಾರಿ ಸಚಿವರು ಜೈಲಿಗೋದ್ರು, ಕರ್ನಾಟಕದಲ್ಲಿ ಜೈಲಿಗೆ ಹೋಗೋರು ಯಾರು? ಅನ್ನೋ ಪ್ರಶ್ನೆ ಎದ್ದಿದೆ.

ದೇಶದ ಅತೀ ದೊಡ್ಡ ಅಬಕಾರಿ ಹಗರಣವನ್ನು ಈಗ ಬಿಟಿವಿ ಬಯಲು ಮಾಡ್ತಿದೆ. ಬಾರ್​ & ಲಾಡ್ಜ್​​ಗಳಿಗೆ ನೀಡುವ ಸಿಎಲ್​ 7 ಲೈಸೆನ್ಸ್​ ನಲ್ಲಿ ಭಾರೀ ಅಕ್ರಮ ನಡೆದಿದ್ದು,  ಲೋಕಾದಲ್ಲಿ ಅಬಕಾರಿ ಅಧಿಕಾರಿಗಳು, ರಾಜಕಾರಣಿಗಳು, ಉದ್ಯಮಿಗಳ ವಿರುದ್ಧ ದೂರು ದಾಖಲಾಗಿದೆ. ಯಾವುದೋ ಜಾಗ ತೋರಿಸಿ ಇನ್ಯಾವುದೋ ಬಾರ್​ & ಲಾಡ್ಜ್​ಗೆ ಸಿಎಲ್​ 7 ಲೈಸೆನ್ಸ್​ ಮಾಡಿದ್ದಾರೆ. ಅಬಕಾರಿ ಇನ್ಸ್​​ಪೆಕ್ಟರ್​, ಎಕ್ಸೈಸ್ ಕಮಿಷನರ್, ಎಕ್ಸೈಸ್​ ಡಿಸಿ, ಮಂತ್ರಿ ಮಟ್ಟದಲ್ಲಿ ಸಿಎಲ್​7 ಹಗರಣ ನಡೆದಿದೆ. ಸುಳ್ಳು ದಾಖಲೆಗಳ ಆಧಾರದಲ್ಲಿ ಅಬಕಾರಿ ಇಲಾಖೆ ಸಿಎಲ್​ 7 ಲೈಸೆನ್ಸ್​ ನೀಡಿದೆ. ಈ ಸಂಬಂಧ ಹರಿಪ್ರಸಾದ್​​ ಮತ್ತು ನಾಲ್ವರು ಲೋಕಾಯುಕ್ತಕ್ಕೆ ಡಿಟೇಲ್ಡ್​ ದೂರು ಕೊಟ್ಟಿದ್ದಾರೆ.

ನೂರು ಕೋಟಿಯ ಸಿಎಲ್​ 7 ಲೈಸೆನ್ಸ್​ ಹಗರಣದಲ್ಲಿ 20 ಕ್ಕೂ ಹೆಚ್ಚು ಅಧಿಕಾರಿಗಳು ಜೈಲು ಸೇರ್ತಾರೆ. ಬೆಂಗಳೂರು ನಗರ, ಕೆ ಆರ್​ ಪುರಂ ಏರಿಯಾದಲ್ಲಿ ಸಿಎಲ್ 7 ಹಗರಣ ನಡೆದಿದ್ದು, ಅಬಕಾರಿ ಇನ್ಸ್​​ಪೆಕ್ಟರ್​ ಭರತ್, ಎಕ್ಸೈಸ್​ ಡಿವೈಎಸ್ಪಿ ತುಕಾರಾಂ ನಾಯಕ್, ಎಕ್ಸೈಸ್​ ಡಿಸಿ ಅಜಿತ್ ಕುಮಾರ್ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ. ಸಿಎಲ್​ 7 ಲೈಸೆನ್ಸ್​ ಮಂಜೂರು ಪ್ರಕ್ರಿಯೆಯಲ್ಲಿ ಭಾರೀ ಅಕ್ರಮ ನಡೆದಿದ್ದು, ಅಬಕಾರಿ ಅಧಿಕಾರಿಗಳು ಜಿಲ್ಲಾಧಿಕಾರಿ ಜಗದೀಶ್​ಗೆ ಸುಳ್ಳು ವರದಿ ನೀಡಿ ದಾರಿ ತಪ್ಪಿಸಿದ್ದಾರೆ. ದಕ್ಷ ಜಿಲ್ಲಾಧಿಕಾರಿ ಜಗದೀಶ್​ ಅವರನ್ನೇ ದಾರಿತಪ್ಪಿಸಿ ಅಧಿಕಾರಿಗಳು ಸಿಎಲ್​7, ಸಿಎಲ್​9 ಲೈಸೆನ್ಸ್​ ನೀಡಿದ್ದಾರೆ.

ಇನ್ನು ಕೆ ಆರ್​ ಪುರಂನ ನಿಮಾರ್ಣ ಹಂತದ ಕಟ್ಟಡಕ್ಕೂ ಸಿಎಲ್ 7 ಲೈಸೆನ್ಸ್​ ಮಂಜೂರು ಮಾಡಿದ್ದು, ಸಿಆರ್​​ ಲಾಡ್ಜ್​ ಮಾಲೀಕರಾದ ಕಿರಣ್ ಸಿ ಕೆ, ಬಿ ಕೆ ಶೇಖರ್, ನಿತಿನ್ ಕೆ, ಋತ್ವಿಕ್ ಹೆಸರಿನಲ್ಲಿ ಸಿಎಲ್​7 ಮಾಡಲಾಗಿದೆ. ಕಿರಣ್ ಸಿ ಕೆ, ಬಿ ಕೆ ಶೇಖರ್, ನಿತಿನ್ ಕೆ, ಋತ್ವಿಕ್ ಹೆಸರಿನಲ್ಲಿ ಸಿಎಲ್​7 ಅಕ್ರಮ ಲೈಸೆಸ್​ ಮಾಡಿದ್ದು, ಮೇಡಹಳ್ಳಿ ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿರುವ ಸಿಆರ್​ ಬೋರ್ಡಿಂಗ್ ಅ್ಯಂಡ್​ ಲಾಡ್ಜಿಂಗ್​, ಗ್ರೌಂಡ್​ ಫ್ಲೋರ್​ ಮತ್ತು ಫಸ್ಟ್​ ಫ್ಲೋರ್​ಗೆ ಮಾತ್ರ ಅಧಿಕಾರಿಗಳು ಸಿಎಲ್​ 7 ಲೈಸೆನ್ಸ್​ ನೀಡಿದ್ದಾರೆ. ಸಿಆರ್​ ಲಾಡ್ಜ್​ ಮಾಲೀಕರು 8 ರೂಂಗಳ ಲಾಡ್ಜ್​ ಅನ್ನು 16 ರೂಂಗಳ ಲಾಡ್ಜ್​ ಎಂದು ತೋರಿಸಿದ್ದು, ಸಿ ಆರ್ ಬೋರ್ಡಿಂಗ್​ & ಲಾಡ್ಜಿಂಗ್ ಬ್ಲೂ ಪ್ರಿಂಟ್​ ನೈಜತೆ ಪರಿಶೀಲಿಸದೇ ಲಂಚ ಪಡೆದು ಸಿಎಲ್​ 7 ಲೈಸೆನ್ಸ್​ ಕೊಟ್ಟಿದ್ದಾರೆ.

ಬೆಂಗಳೂರಿನ ಬಿದರಹಳ್ಳಿ ಮಾರಗೊಂಡನಹಳ್ಳಿಯ ವಿ ಶ್ರೀನಿವಾಸ ಎಂಬವರ ಹೆಸರಿನಲ್ಲಿ ಅಕ್ರಮ ಸಿಎಲ್​7 ಲೈಸೆನ್ಸ್​ ಮಾಡಿದ್ದು, ವೈನ್​​ ಶಾಪ್​ ಅನ್ನು ಲಾಡ್ಜ್​ ಎಂದು ತೋರಿಸಿ ವಿ ಶ್ರೀನಿವಾಸ್ ಸಿಎಲ್​7 ಲೈಸೆನ್ಸ್​ ಪಡೆದಿದ್ದಾರೆ. ಮಾರಗೊಂಡನಹಳ್ಳಿಯ ಶ್ರೀನಿವಾಸ್​ ಹೆಸರಿನ ಸಿಎಲ್​2 ಲೈಸೆನ್ಸ್​​ನಲ್ಲೇ ಕೆಎಂ ಸುಬ್ರಹ್ಮಣ್ಯಗೆ ಸಿಎಲ್​7 ಲೈಸೆನ್ಸ್​ ನೀಡಿದ್ದು, ಮಾರಗೊಂಡನಹಳ್ಳಿಯ ಸೂರ್ಯ ಬೋರ್ಡಿಂಗ್ & ಲಾಡ್ಜಿಂಗ್​ ಸಿಎಲ್​7 ಲೈಸೆನ್ಸ್​​ ಭಾರೀ ಅಕ್ರಮ ನಡೆದಿದೆ. ಭ್ರಷ್ಟ ಅಧಿಕಾರಿಗಳು ಒಂದೇ ವಿಳಾಸದಲ್ಲಿ ಸಿಎಲ್​7, ಸಿಎಲ್​2, ಸಿಎಲ್​ 9 ಲೈಸೆನ್ಸ್​ ನೀಡಿದ್ದಾರೆ.

ಅಷ್ಟೇ ಅಲ್ಲದೆ ಕಿತಗನೂರಿನ ಮುಖ್ಯರಸ್ತೆಯ ಹಳೇ ಹಳ್ಳಿ ಗಾಮದ ಟಿ ಎನ್ ತಿಮ್ಮೇಗೌಡ ಎಂಬಾತ ಬೇರೆ ಕಟ್ಟಡದ ಬ್ಲೂ ಪ್ರಿಂಟ್ ತೋರಿಸಿ ಸಿಎಲ್​7 ಲೈಸೆನ್ಸ್ ಪಡೆದಿದ್ದು, ಮಸೀದಿಯಿಂದ 106 ಮೀಟರ್​ ದೂರದಲ್ಲಿ ವೈನ್​ಶಾಪ್ ಇದೆ ಎಂದು ಸುಳ್ಳು ವರದಿ ನೀಡಿ ಅಧಿಕಾರಿಗಳು ಆತನಿಗೆ ಸಿಎಲ್​2 ಲೈಸೆನ್ಸ್​ ನೀಡಿದ್ದಾರೆ. ಕೆ ಆರ್​ ಪುರಂ ಕೌದೇನಹಳ್ಳಿ ಬೃಂದಾವನ್ ಎಂಟರ್​ಪ್ರೈಸರ್ಸ್​ ಹೆಸರಿನಲಿ ಸಿಎಲ್ 9 ಲೈಸೆನ್ಸ್​ ನೀಡಿದ್ದಾರೆ. ಕಟ್ಟಡದ ಮುಂಭಾಗದ ಫೋಟೋ ತೋರಿಸಿ ಬೃಂದಾವನ್​ ಬಾರ್ ಗೆ ಸಿಎಲ್​9 ಲೈಸೆನ್ಸ್​ ಪಡೆದಿದ್ದಾರೆ. ಇನ್ನು ಸಿಎಲ್​9 ಲೈಸೆನ್ಸ್​ ಪಡೆದ ಬೃಂದಾವನ್​ ಬಾರ್ ವಿಳಾಸದಲ್ಲೇ ಕೆ ಎನ್ ಲಕ್ಷ್ಮಿ ಹೆಸರಲ್ಲಿ ಸಿಎಲ್​7 ಲೈಸೆನ್ಸ್​ ಇದೆ. ಕೊಲೆಪ್ಪ ಕಾನ್ಸೆಪ್ಟ್​ ಪ್ರೈ ಲಿ ಹೆಸರಿನಲ್ಲಿ ಅಬಕಾರಿ ಅಧಿಕಾರಿಗಳು ಸಿಎಲ್​ 7 ಲೈಸೆನ್ಸ್​ ಕೊಟ್ಟಿದ್ದಾರೆ.

ಬಿದರಹಳ್ಳಿಯ ರಾಂಪುರ ಗಾಮದ ಪುಟ್ಟಲಿಂಗಯ್ಯ ಎಂಬವರ ಅಭಿಲಾಷಾ ಬಾರ್ ಅಂಡ್ ರೆಸ್ಟೋರೆಂಟ್ ವಿಳಾಸದಲ್ಲಿ ಸಿ ಪ್ರಕಾಶ್​ಗೆ ಸಿಎಲ್​ 7 ಲೈಸೆನ್ಸ್ ನೀಡಿದ್ದಾರೆ. ಸಿಎಲ್ 7 ಲೈಸೆನ್ಸ್​ನ ನೀಲಿ ನಕಾಶೆಯನ್ನೇ ಬಳಸಿಕೊಂಡು ಲಂಚ ಪಡೆದು ಅಬಕಾರಿ ಅಧಿಕಾರಿಗಳು ಸಿಎಲ್​7, ಸಿಎಲ್​ 9 ಲೈಸೆನ್ಸ್​ ಕೊಟ್ಟಿದ್ದಾರೆ. ಇನ್ನು ಅಧಿಕಾರಿಗಳ ಜೊತೆ ಸಿಎಲ್​ 7, ಸಿಎಲ್ 9 ಪಡೆದ ಉದ್ಯಮಿಗಳು ಜೈಲಿಗೆ ಹೋಗೋದು ಫಿಕ್ಸ್ ಆಗಿದೆ.

ಜೈಲಿಗೆ ಹೋಗುವ ಅಧಿಕಾರಿಗಳು : 

  • ಅಬಕಾರಿ ಇನ್ಸ್​​ಪೆಕ್ಟರ್​ ಭರತ್,
  • ಎಕ್ಸೈಸ್​ ಡಿವೈಎಸ್ಪಿ ತುಕಾರಾಂ ನಾಯಕ್
  • ಎಕ್ಸೈಸ್​ ಡಿಸಿ ಅಜಿತ್ ಕುಮಾರ್
  • 20 ಅಬಕಾರಿ ಅಧಿಕಾರಿಗಳು ಜೈಲಿಗೆ ಹೋಗೋದು ಫಿಕ್ಸ್​ಜೈಲಿಗೆ ಹೋಗುವ ಬಾರ್​ ಓನರ್ಸ್​ :
  • ಕಿರಣ್ ಸಿ ಕೆ, ಮಾಲೀಕರು ಸಿಆರ್ ಬೋರ್ಡಿಂಗ್​ & ಲಾಡ್ಜಿಂಗ್ ಮೇಡಹಳ್ಳಿ
  • ಬಿ ಕೆ ಶೇಖರ್, ಮಾಲೀಕರು ಸಿಆರ್ ಬೋರ್ಡಿಂಗ್​ & ಲಾಡ್ಜಿಂಗ್​ ಮೇಡಹಳ್ಳಿ
  • ನಿತಿನ್ ಕೆ, ಮಾಲೀಕರು ಸಿಆರ್ ಬೋರ್ಡಿಂಗ್​ & ಲಾಡ್ಜಿಂಗ್ ಮೇಡಹಳ್ಳಿ
  • ಋತ್ವಿಕ್, ಮಾಲೀಕರು ಸಿಆರ್ ಬೋರ್ಡಿಂಗ್​ & ಲಾಡ್ಜಿಂಗ್ ಮೇಡಹಳ್ಳಿ
  • ವಿ ಶ್ರೀನಿವಾಸ, ಬಿದರಹಳ್ಳಿ ಮಾರಗೊಂಡನಹಳ್ಳಿ ವೈನ್ ಶಾಪ್ ಮಾಲೀಕ
  • ಮಾರಗೊಂಡನಹಳ್ಳಿಯ ಸೂರ್ಯ ಬೋರ್ಡಿಂಗ್ & ಲಾಡ್ಜಿಂಗ್​ ಮಾಲೀಕ
  • ತಗನೂರಿನ ಮುಖ್ಯರಸ್ತೆಯ ಹಳೇ ಹಳ್ಳಿ ಗಾಮದ ಟಿ ಎನ್ ತಿಮ್ಮೇಗೌಡ
  • ಕೆಆರ್​ ಪುರಂ ಕೌದೇನಹಳ್ಳಿ ಬೃಂದಾವನ್ ಬಾರ್ ಓನರ್​
  • ಕೆ ಎನ್ ಲಕ್ಷ್ಮಿ, ಬೃಂದಾವನ್ ಬಾರ್ ವಿಳಾಸದಲ್ಲೇ ಲಾಡ್ಜ್​ಗೆ ಅಬಕಾರಿ ಲೈಸೆನ್ಸ್ ಪಡೆದವರು
  • ಬಿದರಹಳ್ಳಿ ರಾಂಪುರದ ಅಭಿಲಾಷ ಬಾರ್ ಓನರ್ ಪುಟ್ಟಲಿಂಗಯ್ಯ
  • ದೀಪಾ ಕಂಪರ್ಟ್​ ಲಾಡ್ಜ್ ಮಾಲೀಕ ಇ ಸಿ ಪ್ರಕಾಶ್

ಇದನ್ನೂ ಓದಿ : ಕಾರು ಟಚ್ ಮಾಡಿದ್ದೀರಿ ಅಂತ ಗಲಾಟೆ – ಹಣ ಮಾಡಲು ಹೊಸ ವರಸೆ ತೆಗೆದ ಖತರ್ನಾಕ್ ಖದೀಮರು.. ವಾಹನ ಸವಾರರೇ B Careful!

Btv Kannada
Author: Btv Kannada

Read More