ಚಿಕ್ಕಬಳ್ಳಾಪುರದಲ್ಲಿ ತಂದೆ ಸಾವಿನಿಂದ ಮನನೊಂದು ಮಗಳು ಆತ್ಮಹತ್ಯೆ!

ಚಿಕ್ಕಬಳ್ಳಾಪುರ : ತಂದೆಯ ಸಾವಿನಿಂದ ಮನನೊಂದ ಮಗಳು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. 22 ವರ್ಷದ ಸ್ವರ್ಣ ಮೃತ ಯುವತಿ.

ಬೆಂಗಳೂರಿನ ಮಹಾರಾಣಿ ಕಾಲೇಜಿನಲ್ಲಿ Msc ಪದವಿ ವ್ಯಾಸಂಗ ಮಾಡ್ತಿದ್ದ ಸ್ವರ್ಣ ಕಾಲೇಜಿನ ಹಾಸ್ಟೆಲ್‌ನಲ್ಲಿ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಮನೆಗೆ ಬಂದಿದ್ದ ಮಗಳನ್ನ ತಾಯಿ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಮಗಳು ಸ್ವರ್ಣ ಸಾವನ್ನಪ್ಪಿದ್ದಾಳೆ.

ಈಕೆ ತಂದೆ ಕಳೆದ 3 ತಿಂಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದರು. ಅಂದಿನಿಂದಲೂ ಮಾನಸಿಕವಾಗಿ ಕುಗ್ಗಿ ಹೋಗಿ ಕಿನ್ನೆತೆಗೆ ಓಳಗಾಗಿದ್ದ ಸ್ವರ್ಣ ಸೂಸೈಡ್ ಮಾಡಿಕೊಂಡಿದ್ದಾಳೆ.

ಇದನ್ನೂ ಓದಿ : ಬೆಂಗಳೂರು : ಕ್ರೇನ್ ತುಂಡಾಗಿ ಬಿದ್ದು ಐವರಿಗೆ ಗಾಯ, ಓರ್ವ ಗಂಭೀರ!

Btv Kannada
Author: Btv Kannada

Read More