ತುರ್ತು ಭತ್ಯೆ ಹೆಸರಲ್ಲಿ ಸರ್ಕಾರದ ಬೊಕ್ಕಸಕ್ಕೆ ವಂಚನೆ – ಗುಲ್ಬರ್ಗ ವಿವಿಯ ಮತ್ತೊಂದು ಕರ್ಮಕಾಂಡ ಬಯಲು!

ಗುಲ್ಬರ್ಗ : ರಾಜ್ಯದಲ್ಲಿ ದಿನೇ ದಿನೇ ಭ್ರಷ್ಟಾಚಾರದ ಸಂಖ್ಯೆ ಹೆಚ್ಚಾಗುತ್ತಿದ್ದು, ಸರ್ಕಾರಿ ಕಚೇರಿ, ಕೆಲವು ವಿಶ್ವವಿದ್ಯಾನಿಲಯಗಳಲ್ಲಿ ಭ್ರಷ್ಟ ಸಿಬ್ಬಂದಿಗಳು ಹಣ ಲೂಟಿ ಮಾಡುತ್ತಲೇ ಇದ್ದಾರೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಭಾರೀ ವಂಚನೆಯಾಗುತ್ತಿದ್ದು, ಇದೀಗ ಗುಲ್ಬರ್ಗ ವಿವಿಯ ಮತ್ತೊಂದು ಕರ್ಮಕಾಂಡವನ್ನು BTV ಬಯಲು ಮಾಡಿದೆ.

ಗುಲ್ಬರ್ಗ ವಿವಿ ಅಕೌಂಟೆಂಟ್ ವಿರುದ್ಧ ತುರ್ತು ಭತ್ಯೆ ಹೆಸರಲ್ಲಿ ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ. ವಿವಿಯ ಹಣಕಾಸು ವಿಭಾಗದ ಅಕೌಂಟೆಂಟ್ ಶರಣು ಹೂಗಾರ ಸಿಬ್ಬಂದಿಗೆ ಸಂಬಳದ ಜೊತೆ ಹೆಚ್ಚುವರಿ ತುರ್ತು ಭತ್ಯೆ ಹಾಕ್ತಿದ್ದ. ನಂತರ ತಪ್ಪಾಗಿ ಬಂದಿದೆ ಅಂತಾ ತನ್ನ ಖಾತೆಗೆ ವಾಪಾಸು ಹಣ ಹಾಕಿಸಿಕೊಳ್ಳುತ್ತಿದ್ದ.

ಶರಣು ಹೂಗಾರ
                    ಶರಣು ಹೂಗಾರ

ಇದೀಗ ಗುಲ್ಬರ್ಗ ವಿವಿಯ ಕರ್ಮಕಾಂಡ ಬಟಾ ಬಯಲಾಗಿದ್ದು, ಸದ್ಯ ಅಕೌಂಟೆಂಟ್ ಶರಣು ಹೂಗಾರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಗುಲ್ಬರ್ಗ ವಿಸಿ ರಮೇಶ್ ಹೇಳಿದ್ದಾರೆ.

ಗುಲ್ಬರ್ಗ ವಿಸಿ ರಮೇಶ್
        ಗುಲ್ಬರ್ಗ ವಿಸಿ ರಮೇಶ್

ಇದನ್ನೂ ಓದಿ : ಸರ್ಕಾರಿ ಕಾರ್ಯಕ್ರಮಕ್ಕೆ ಸ್ಥಳೀಯ MLA, MPನ ಕರಿಯದೇ ಅವಮಾನಿಸಿದ್ದಾರೆ – ಆರ್​.ಅಶೋಕ್ ಕಿಡಿ!

Btv Kannada
Author: Btv Kannada

Read More