ಬೆಂಗಳೂರು : ಕೊಲೆಯತ್ನ ಕೇಸ್ ಬೆನ್ನತ್ತಿದ ಪೊಲೀಸರ ಕೈಗೆ ನೂರಾರು ಕೋಟಿಯ ಲ್ಯಾಂಡ್ ಗ್ರ್ಯಾಬಿಂಗ್ ಗ್ಯಾಂಗ್ವೊಂದು ಸಿಕ್ಕಿಬಿದ್ದಿದೆ. ನಟೋರಿಯಸ್ ಗ್ಯಾಂಗ್ ಬೆತ್ತನಗೆರೆ ಶಂಕರನ ಹತ್ಯೆಗೆ ಸ್ಕೆಚ್ ಹಾಕಿ ಸಿಸಿಬಿಗೆ ಲಾಕ್ ಆಗಿದ್ದು, ಆರೋಪಿಗಳ ವಿಚಾರಣೆ ವೇಳೆ ಹಲವು ಜಮೀನು ಕಬಳಿಸಿರೋದು ಪತ್ತೆಯಾಗಿದೆ.

ಬೆತ್ತನಗೆರೆ ಶಂಕರ ಸುಂಕದಕಟ್ಟೆ ಬಳಿ ಬರುವ ಮಾಹಿತಿ ಹೊಂದಿದ್ದ ಗ್ಯಾಂಗ್ ಇದೇ ವೇಳೆ ಮಾರಕಾಸ್ತ್ರ ಸಮೇತ ಬ್ಯಾಡರಹಳ್ಳಿ ಬಳಿ ಹೊಂಚುಹಾಕಿತ್ತು. ಎಲ್ಲಾ ಸ್ಕೆಚ್ ಹಾಕಿಕೊಂಡೇ ಬೆತ್ತನಗೆರೆ ಶಂಕರನನ್ನು ಈ ನಟೋರಿಯಸ್ ಗ್ಯಾಂಗ್ ಹತ್ಯೆಗೆ ಯತ್ನಿಸಿದೆ. ಈ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ಶರತ್, ರಾಜೇಶ್, ಆಕಾಶ್, ಅಭಿಲಾಶ್, ಅವಿನಾಶ್ ಅನ್ನು ಅರೆಸ್ಟ್ ಮಾಡಿದ್ದು, ಬಂಧಿತ ಆರೋಪಿಗಳು ದಾಬಸ್ ಪೇಟೆ, ನೆಲಮಂಗಲ ಮೂಲದವರಾಗಿದ್ದಾರೆ.

ಆರೋಪಿಗಳ ವಿಚಾರಣೆ ವೇಳೆ ಕೊರಟಗೆರೆ ಸುತ್ತಮುತ್ತ ಜಮೀನು ಕಬಳಿಕೆ ಮಾಡಿರೋದು ಪತ್ತೆಯಾಗಿದೆ. ಅಗ್ರಿಮೆಂಟ್ ಹಾಕಿಕೊಂಡು ಸಾಲ ಕೊಡುವ ನೆಪದಲ್ಲಿ ವಂಚನೆ ಮಾಡಿದ್ದಾರೆ. ಆರೋಪಿಗಳು ಕೋಟ್ಯಾಂತರ ಮೌಲ್ಯದ ಜಮೀನನ್ನ ರಿಜಿಸ್ಟರ್ ಮಾಡಿಕೊಳ್ತಿದ್ದರು. ಈ ಗ್ಯಾಂಗ್ ನೆಲಮಂಗಲ ಸುತ್ತ ಜಮೀನು ಹೊಂದಿರೋ ಅಮಾಯಕರಿಗೆ ಸಾಲ ನೀಡ್ತಿತ್ತು. ಅಗ್ರಿಮೆಂಟ್ ಬರೆಸ್ತಿವೆಂದು ಆರೋಪಿಗಳು ರಿಜಿಸ್ಟರ್ ಸೇಲ್ ಡೀಡ್ ಮಾಡಿಕೊಳ್ತಿತ್ತು.

ಆರೋಪಿಗಳು ಸಾಲ ಅಗ್ರಿಮೆಂಟ್ ಮಾಡ್ಕೊಟ್ಟಿದ್ದೀವಿ ಅಂದ್ಕೊಂಡಿದ್ದ ಅಮಾಯಕರ ಆಸ್ತಿ ಕಬಳಿಸ್ತಿದ್ದು, ಸಿಸಿಬಿ ಪೊಲೀಸರ ವಿಚಾರಣೆ ವೇಳೆ 20ಕ್ಕೂ ಅಧಿಕ ಮಂದಿಗೆ ಇದೇ ರೀತಿ ವಂಚಿಸಿರೋದು ಬೆಳಕಿಗೆ ಬಂದಿದೆ. 20ಕ್ಕೂ ಹೆಚ್ಚು ಮಂದಿಗೆ ವಂಚಿಸಿ ನೂರಾರು ಕೋಟಿ ಮೌಲ್ಯದ ಜಮೀನು ಕಬಳಿಸಿರೋದು ಪತ್ತೆಯಾಗಿದೆ.
ಇದನ್ನೂ ಓದಿ : ಇಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಜಿಬಿಎ ಮೊದಲ ಸಭೆ – ಕ್ಷೇತ್ರದ ಅಭಿವೃದ್ಧಿ ಬಗ್ಗೆ ಮಹತ್ವದ ಚರ್ಚೆ!







