ಕೋರ್ಟ್​ಗೆ ಕರೆತಂದಿದ್ದ ಆರೋಪಿ ಕಟ್ಟಡದಿಂದ ಜಿಗಿದು ಆತ್ಮಹತ್ಯೆ!

ಬೆಂಗಳೂರು : ಕೋರ್ಟ್​ಗೆ ಕರೆತಂದಿದ್ದ ಆರೋಪಿ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಗೌತಮ್ ಆತ್ಮಹತ್ಯೆ ಮಾಡಿಕೊಂಡ ಆರೋಪಿ.

ಗೌತಮ್ ವಿರುದ್ಧ ಆಡುಗೋಡಿ ಠಾಣೆಯಲ್ಲಿ ಪೋಕ್ಸೋ ಕೇಸ್ ದಾಖಲಾಗಿತ್ತು. ಈ ಸಂಬಂಧ ಪೊಲೀಸರು ಆರೋಪಿ ಗೌತಮ್​ನನ್ನು ಸಿಟಿ ಸಿವಿಲ್ ಕೋರ್ಟ್​ಗೆ ಕರೆತಂದಿದ್ದರು. ಈ ವೇಳೆ ಸರ್, ಟಾಯ್ಲೆಟ್​ಗೆ ಹೋಗಿ ಬರ್ತೀನಿ ಅಂತ ಗೌತಮ್ ಹೇಳಿದ್ದು, ಆತನ ಹಿಂದೆಯೇ ಪೊಲೀಸ್ ಪೇದೆ ಕೂಡ ಹೋಗಿದ್ದರು. ಆದರೆ ಅಷ್ಟರಲ್ಲೇ ಗೌತಮ್ ಓಡಿಹೋಗಿ ಐದನೇ ಅಂತಸ್ಥಿನಿಂದ ಜಿಗಿದಿದ್ದಾನೆ.

ನೆಲಕ್ಕೆ ಬೀಳ್ತಿದ್ದಂತೆ ಗೌತಮ್​ನ ಪ್ರಾಣಪಕ್ಷಿ ಹಾರಿ ಹೋಗಿದ್ದು, ಸದ್ಯ ಹಲಸೂರುಗೇಟ್ ಪೊಲೀಸರು ಘಟನಾ ಸ್ಥಳಕ್ಕೆ ದೌಡಾಯಿಸಿದ್ದಾರೆ.

ಇದನ್ನೂ ಓದಿ : ವಿದೇಶದಲ್ಲಿ ಕೂತು ಸೋಶಿಯಲ್ ಮೀಡಿಯಾದಲ್ಲಿ ಕೋಮುಗಲಭೆ ಪೋಸ್ಟ್ – 18 ಅಕೌಂಟ್​ಗಳನ್ನು ಡಿಲೀಟ್ ಮಾಡಿ ಪೊಲೀಸರ ಕ್ರಮ!

Btv Kannada
Author: Btv Kannada

Read More