ಕನ್ನಡ ಹೋರಾಟಗಾರರಿಗೆ ಅವಮಾನ ಮಾಡಿದ ಮೆಂಟಲ್ ಸೋನು ವಿರುದ್ಧ ಭುಗಿಲೆದ್ದ ಆಕ್ರೋಶ – ಹುಡುಕಿಕೊಂಡು ಬಂದು ಹೊಡೆಯುತ್ತೇವೆ ಎಂದ ಹೋರಾಟಗಾರರು!

ಬೆಂಗಳೂರು : ಕನ್ನಡ ಪರಹೋರಾಟಗಾರ ವಿರುದ್ಧ ನಾಲಿಗೆ ಹರಿಬಿಟ್ಟ ಸೋನು ವಿರುದ್ಧ ಆಕ್ರೋಶ ಭುಗಿಲೆದ್ದಿದ್ದು, ಕನ್ನಡ ಪರಹೋರಾಟಗಾರರು ಸೋನುಗೆ ಹುಡುಕಿಕೊಂಡು ಬಂದು ಹೊಡೆಯುತ್ತೇವೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

ಕನ್ನಡಪರ ಹೋರಾಟಗಾರರ ಬಗ್ಗೆ ಮಾತಾಡೋ ಯೋಗ್ಯತೆ ಅರ್ಹತೆ ಎರಡು ನಿನಗಿಲ್ಲ ಕಣವ್ವ ತಾಯಿ. ಹೋರಾಟಗಾರರ ಕಾಲಿನ ಧೂಳಿಗೂ ಸಮವಿಲ್ಲ ನೀನು. ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಬೇಡ ಬಂದರೆ ಹೊಸಕಿ ಹಾಕಿ ಬಿಡ್ತೀವಿ ಹುಷಾರು ಎಂದು ಆಕ್ರೋಶ ಹೊರಹಾಕಿದ್ದಾರೆ.

ಮೊದಲು ಮೈ ತುಂಬಾ ಬಟ್ಟೆ ಹಾಕು ಆಮೇಲೆ ದೊಡ್ಡ ದೊಡ್ಡದಾಗಿ ಮಾತಾಡುವಂತೆ ನಿನ್ನ ಪ್ರಚಾರದ ತೆವಲಿಗೆ ಹೋರಾಟಗಾರರ ಬಗ್ಗೆ ಹಗುರವಾಗಿ ಮಾತನಾಡಬೇಡ ಹೀಗೆ ಮುಂದುವರೆದರೆ ನಿನ್ನ ಹುಡುಕಿಕೊಂಡು ಬರುವ ಸಮಯ ದೂರವಿಲ್ಲ ಎಂದು ಕನ್ನಡ ಪರಹೋರಾಟಗಾರರು ವಾರ್ನಿಂಗ್ ಕೊಟ್ಟಿದ್ದಾರೆ.

ಇದನ್ನೂ ಓದಿ : ಹಿರಿಯ ವಕೀಲ ಎಸ್.ಬಾಲನ್​​ ನೇತೃತ್ವದ ಹೋರಾಟಕ್ಕೆ ಕಡೆಗೂ ಜಯ – ಶೂ ಎಸೆದ ವಕೀಲನ ಮೇಲೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ FIR!

Btv Kannada
Author: Btv Kannada

Read More