ಬೆಂಗಳೂರು : ಸುಪ್ರೀಂಕೋರ್ಟ್ ಸಿಜೆ ಬಿ.ಆರ್. ಗವಾಯಿ ಅವರ ಮೇಲೆ ವಕೀಲ ರಾಕೇಶ್ ಕಿಶೋರ್ ಶೂ ಎಸೆತ ಪ್ರಕರಣ ದೇಶಾದ್ಯಂತ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ವಕೀಲನ ವರ್ತನೆಗೆ ಎಲ್ಲೆಡೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಪ್ರಧಾನಿ ಮೋದಿ ಸೇರಿದಂತೆ ಸಿಎಂ ಸಿದ್ದರಾಮಯ್ಯ ಘಟನೆಯನ್ನು ಖಂಡಿಸಿದ್ದಾರೆ. ಇದೀಗ ಹಿರಿಯ ವಕೀಲ ಎಸ್.ಬಾಲನ್ ನೇತೃತ್ವದಲ್ಲಿ ವಿಧಾನಸೌಧ ಪೊಲೀಸ್ ಠಾಣೆ ಮುಂಭಾಗ ಕರ್ನಾಟಕ ರಾಜ್ಯ ವಕೀಲರ SC-ST ಸಂಘ ಪ್ರತಿಭಟನೆ ನಡೆಸುತ್ತಿದೆ.

ಸುಪ್ರೀಂಕೋರ್ಟ್ ಜಡ್ಜ್ ಬಿ.ಆರ್.ಗವಾಯಿ ಪೀಠಕ್ಕೆ ಶೂ ಎಸೆದಿದ್ದಕ್ಕೆ ರಾಜ್ಯ ವಕೀಲರ SC-ST ಸಂಘ ವಿಧಾನಸೌಧ ಪೊಲೀಸ್ ಠಾಣೆ ಮುಂಭಾಗ ಆಕ್ರೋಶ ಹೊರಹಾಕಿದೆ. ಹಿರಿಯ ವಕೀಲ ಎಸ್.ಬಾಲನ್ ನೇತೃತ್ವದಲ್ಲಿ ನ್ಯಾಯಮೂರ್ತಿ ಗವಾಯಿ ಅವರಿಗೆ ಮಾಡಿದ ಅಪಮಾನ ವಿರೋಧಿಸಿ ಪ್ರತಿಭಟನೆ ನಡೆದಿದ್ದು, ಪೊಲೀಸರೇ ತಕ್ಷಣವೇ ರಾಕೇಶ್ ಕಿಸೋರ್ ಅಡ್ವೋಕೆಟರನ್ನು ಬಂಧಿಸಿ ಎಂದು ಕರ್ನಾಟಕ ರಾಜ್ಯ ವಕೀಲರ SC-ST ಸಂಘ ಆಗ್ರಹಿಸಿದೆ.

ಪ್ರಕರಣ ಹಿನ್ನೆಲೆ : ಸೋಮವಾರ ವಕೀಲ ರಾಕೇಶ್ ಕಿಶೋರ್ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ಅವರ ಮೇಲೆ ನ್ಯಾಯಾಲಯದಲ್ಲಿ ಶೂ ಎಸೆಯಲು ಯತ್ನಿಸಿದ್ದರು. ಈ ಸಂಬಂಧ ಅರೆಸ್ಟ್ ಆಗಿದ್ದ ವಕೀಲ ರಾಕೇಶ್ ಕಿಶೋರ್‌ನನ್ನು ದೆಹಲಿ ಪೊಲೀಸರು ಬಿಡುಗಡೆ ಮಾಡಿದ್ದಾರೆ. ವಕೀಲನ ವಿರುದ್ಧ ಆರೋಪ ಹೊರಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದ ಕಾರಣ ಪೊಲೀಸರು ಆತನನ್ನು ಬಿಡುಗಡೆ ಮಾಡಿದರು.
ಇದನ್ನೂ ಓದಿ : ಬಿಜೆಪಿ MLA, ಮುಖ್ಯಾಧಿಕಾರಿ ಕಿರುಕುಳಕ್ಕೆ ಬೇಸತ್ತ ಕಂದಾಯ ನಿರೀಕ್ಷಕ ಪತ್ರ ಬರೆದಿಟ್ಟು ನಾಪತ್ತೆ!







