ಮಂಡ್ಯ : ದೇಗುಲದ ಹುಂಡಿ ಕದ್ದು ಹಣ ಎಣಿಸುವ ವೇಳೆ ಮಂಡ್ಯ ಪೊಲೀಸರ ಕೈಗೆ ಖತರ್ನಾಕ್ ಕಳ್ಳರು ಸಿಕ್ಕಿ ಬಿದ್ದಿರುವ ಘಟನೆ ಜಿಲ್ಲೆಯ ಮಾಂಡವ್ಯ ಕಾಲೇಜಿನ ಬಳಿ ನಡೆದಿದೆ.

ನಾಲ್ವರು ಖದೀಮರ ಮಧ್ಯೆ ದೇಗುಲದ ಹುಂಡಿ ಕದ್ದ ಹಣ ಹಂಚಿಕೆ ವಿಷಯವಾಗಿ ಗಲಾಟೆ ನಡೆದಿದ್ದು, ಈ ವೇಳೆ ಸಾರ್ವಜನಿಕರು ಪೊಲೀಸರಿಗೆ ಯುವಕರ ಗಲಾಟೆ ಬಗ್ಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ವಿಚಾರಣೆ ವೇಳೆ ಈ ಗ್ಯಾಂಗ್ ದೇಗುಲದ ಹುಂಡಿ ಕದ್ದಿರೋ ವಿಚಾರ ಬಾಯ್ಬಿಟ್ಟಿದೆ. ಸಿಕ್ಕಿಬಿದ್ದ ನಾಲ್ವರು ಯುವಕರು ಮಂಡ್ಯ ತಾಲೂಕಿನ ಬೂದನೂರು ಗ್ರಾಮದವರಾಗಿದ್ದು, ಬಂಧಿತರನ್ನು ವಶಕ್ಕೆ ಪಡೆದು ಮಂಡ್ಯ ಗ್ರಾಮಾಂತರ ಪೊಲೀಸರು ಠಾಣೆಗೆ ಕರೆದೊಯ್ದಿದ್ದಾರೆ.
ಇದನ್ನೂ ಓದಿ : ‘ಪ್ರೇಮಿಗಳ ಗಮನಕ್ಕೆ’ ಸಿನಿಮಾದ ಟ್ರೈಲರ್ ಬಿಡುಗಡೆ!
Author: Btv Kannada
Post Views: 304







