ನಕಲಿ ದಾಖಲೆ ಸೃಷ್ಟಿಸಿ ವಂಚನೆ – ಮಹರ್ಷಿ ವಾಲ್ಮೀಕಿ ಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ವಿರುದ್ಧ FIR!

ದಾವಣಗೆರೆ : ನಕಲಿ ದಾಖಲೆಗಳನ್ನು ಸೃಷ್ಟಿಸಿ ವಂಚಿಸಿದ ಆರೋಪದಡಿ ಮಹರ್ಷಿ ವಾಲ್ಮೀಕಿ ಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಸೇರಿ 8 ಜನರ ವಿರುದ್ಧ FIR ದಾಖಲಾಗಿದೆ.

ವಾಲ್ಮೀಕಿ ಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ವಿರುದ್ಧ ಮಾರುತಿ ಮ್ಯಾನ್ ಪವರ್ ಸಂಸ್ಥೆ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿಸಿ ವಂಚಿಸಿದ ಆರೋಪ ಕೇಳಿಬಂದಿದ್ದು, ಈ ಸಂಬಂಧ ಕೋರ್ಟ್ ಸೂಚನೆ ಮೇರೆಗೆ ಪ್ರಸನ್ನಾನಂದಪುರಿ ಸ್ವಾಮೀಜಿ ವಿರುದ್ಧ BNS 417, 418, 419, 420, 423, 465, 466, 467, 468, 143 ಸೆಕ್ಷನ್ ಅಡಿ ಹಾವೇರಿ ಜಿಲ್ಲೆ ರಾಣೆಬೆನ್ನೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಸನ್ನಾನಂದಪುರಿ ಸ್ವಾಮೀಜಿ ಕಮಿಟಿ ಬದಲಾವಣೆ ಮಾಡಲು ನಕಲು ದಾಖಲೆ ಸೃಷ್ಟಿಸಿ ನೋಂದಣಿ ಕಚೇರಿಗೆ ವಂಚನೆ ಮಾಡಿದ್ದು, ಕಮಿಟಿ ಸದಸ್ಯರ ಸಹಿಯನ್ನೇ ನಕಲು ಮಾಡಿ ವಂಚಿಸಿರುವ ಗಂಭೀರ ಆರೋಪ ಕೇಳಿಬಂದಿದೆ. ಈ ಬಗ್ಗೆ ರಾಣೆಬೆನ್ನೂರಿನ ಶ್ರೀಧರ್ ಚಿಕ್ಕಣ್ಣ ಎಂಬುವವರು ನೀಡಿದ ದೂರಿನ ಮೇಲೆ ಕೇಸ್ ದಾಖಲಾಗಿದೆ. ಹಾಗಾಗಿ ನಿನ್ನೆ ಬೆಂಗಳೂರಲ್ಲಿ ನಡೆದ ವಾಲ್ಮೀಕಿ ಜಯಂತಿ ಹಾಗೂ ದಾವಣಗೆರೆ ನಗರದ ಕಾರ್ಯಕ್ರಮಕ್ಕೂ ಸ್ವಾಮೀಜಿ ಗೈರಾಗಿದ್ದರು.

ಇದೀಗ ಸಾಮಾಜಿಕ ಜಾಲತಾಣದಲ್ಲಿ ವಾಲ್ಮೀಕಿ ಸ್ವಾಮೀಜಿ ವಿರುದ್ಧ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ವಾಲ್ಮೀಕಿ ಜಯಂತಿ ಕಾರ್ಯಕ್ರಮಕ್ಕೆ ಸ್ವಾಮೀಜಿ ಬೇಡ ಅನ್ನೋ ಅಭಿಯಾನ ಮಾಡುತ್ತಿದ್ದಾರೆ. ವಂಚನೆ ಕೇಸಲ್ಲಿ A-1 ಆರೋಪಿಯಾಗಿರುವ ಪ್ರಸನ್ನಾನಂದಪುರಿ ಸ್ವಾಮೀಜಿ ವಿರುದ್ಧ ಬರೋಬ್ಬರಿ 10 ಸೆಕ್ಷನ್ ಅಡಿ ಪ್ರಕರಣ ದಾಖಲಾಗಿದ್ದು, ಇದೀಗ ವಾಲ್ಮೀಕಿ ಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿಗೆ ಬಂಧನದ ಭೀತಿ ಶುರುವಾಗಿದೆ.

ಇದನ್ನೂ ಓದಿ : ಅಟೆಂಡೆನ್ಸ್ ಕೊಡಿಸೋದಾಗಿ BCA ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ – ಕ್ರೈಸ್ಟ್ ಕಾಲೇಜ್ HOD ಅರೆಸ್ಟ್!

Btv Kannada
Author: Btv Kannada

Read More