ಬೆಂಗಳೂರಲ್ಲಿ ಬೃಹತ್ ಗಾತ್ರದ ಮರದ ಕೊಂಬೆ ಬಿದ್ದು ಯುವತಿ ಸಾವು!

ಬೆಂಗಳೂರು : ಬೃಹತ್ ಗಾತ್ರದ ಮರದ ಕೊಂಬೆ ಬಿದ್ದು ಯುವತಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಸೋಲದೇವನಹಳ್ಳಿಯಲ್ಲಿ ನಡೆದಿದೆ. 24 ವರ್ಷದ ಕೀರ್ತನಾ ಸಾವನ್ನಪ್ಪಿರುವ ಯುವತಿ.

ಹೆಬ್ಬಾಳ ಮೂಲದ ಯುವತಿ ಕೀರ್ತನಾ ಮತ್ತು ಆಕೆಯ ಸ್ನೇಹಿತನ ಜೊತೆ ಇಲ್ಲಿನ ಆಚಾರ್ಯ ಕಾಲೇಜಿನಲ್ಲಿ ನಡೆಯುತ್ತಿದ್ದ ಸ್ಯಾಂಡಲ್​ವುಡ್ ಕ್ರಿಕೆಟ್ ಪ್ರೀಮಿಯರ್‌ ಲೀಗ್ ನೋಡೋಕೆ ಹೋಗಿದ್ದರು. ಕ್ರಿಕೆಟ್ ಮ್ಯಾಚ್ ನೋಡಿಕೊಂಡು ವಾಪಸ್ ಬರ್ತಿದ್ದಾಗ ಏಕಾಏಕಿ ಮರದ ಕೊಂಬೆ ಬಿದ್ದಿದೆ. ಈ ವೇಳೆ ಕೀರ್ತನಾ ಸ್ಥಳದಲ್ಲೇ ಮೃತಪಟ್ಟಿದ್ದು, ಹಿಂಬದಿಯಲ್ಲಿ ಕೂತಿದ್ದ ವ್ಯಕ್ತಿಗೆ ಗಾಯಗಳಾಗಿದೆ. ಈ ಸಂಬಂಧ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆಯಲ್ಲಿ ಮತ್ತೊಬ್ಬ ಬೈಕ್ ಸವಾರ ಭಾಸ್ಕರ್‌ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮರ ಬಿದ್ದ ತಕ್ಷಣ ಕೊಂಬೆಗಳನ್ನು ತೆರವು ಮಾಡಿ ಸವಾರನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ : ದಸರಾ ಬೆನ್ನಲ್ಲೇ ಪಡಿತರ ಚೀಟಿದಾರರಿಗೆ ಬಿಗ್ ಶಾಕ್ – ಅನ್ನಭಾಗ್ಯ ಅಕ್ಕಿ ಪಡೆಯಲು ಬಂದವರ BPL ಕಾರ್ಡ್​ಗಳೇ ರದ್ದು!

Btv Kannada
Author: Btv Kannada

Read More