ಬಿಗ್​ಬಾಸ್ ಮನೆಗೆ ಮತ್ತೆ ಎಂಟ್ರಿ ಕೊಟ್ಟ ರಕ್ಷಿತಾ ಶೆಟ್ಟಿ – ಕಿಚ್ಚನ ಮುಂದೆಯೇ ಅಬ್ಬರಿಸಿದ ಕರಾವಳಿ ಕುವರಿ!

‘ಬಿಗ್​​ಬಾಸ್ ಕನ್ನಡ ಸೀಸನ್ 12’ರ ಗ್ರ್ಯಾಂಡ್ ಓಪನಿಂಗ್ ದಿನದಂದು ಬಿಗ್​​ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದ ರಕ್ಷಿತಾ ಶೆಟ್ಟಿಯನ್ನು 24 ಗಂಟೆ ಕಳೆಯುವುದರೊಳಗೆ ಎಲಿಮಿನೇಷನ್ ಮಾಡಲಾಗಿತ್ತು. ಆದರೆ ಇದೀಗ ಮತ್ತೆ ರಕ್ಷಿತಾ ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

ಕನ್ನಡ ಬಿಗ್​​ಬಾಸ್ ಇತಿಹಾಸದಲ್ಲಿಯೇ ಇಷ್ಟು ತ್ವರಿತವಾಗಿ ಯಾರೂ ಎಲಿಮಿನೇಟ್ ಆಗಿರಲಿಲ್ಲ. ರಕ್ಷಿತಾರ ಆಟವನ್ನು ನೋಡದೆ ಅವರನ್ನು ಹೊರಗೆ ಕಳಿಸಿದರ ಬಗ್ಗೆ ಪ್ರೇಕ್ಷಕರು ಬೇಸರ ವ್ಯಕ್ತಪಡಿಸಿದ್ದರು. ಈಗ ಅಚ್ಚರಿ ಎಂಬಂತೆ ರಕ್ಷಿತಾ ಮತ್ತೆ ಬಿಗ್​​ಬಾಸ್​ಗೆ ಮರಳಿ ಬಂದಿದ್ದಾರೆ.

ಇದೀಗ ರಕ್ಷಿತಾ ಶೆಟ್ಟಿ ಬಿಗ್​​ಬಾಸ್​ಗೆ ಮತ್ತೆ ಎಂಟ್ರಿ ಕೊಟ್ಟಿರುವ ಪ್ರೋಮೊ ರಿಲೀಸ್ ಆಗಿದೆ. ಕಿಚ್ಚ ಸುದೀಪ್, ರಕ್ಷಿತಾ ಶೆಟ್ಟಿ ಅವರನ್ನು ಮತ್ತೆ ಬಿಗ್​​ಬಾಸ್​ಗೆ ಸ್ವಾಗತಿಸಿದ್ದಾರೆ. ಏನು ಹಠಾತ್ತನೆ ಹೊರಗೆ ಕಳಿಸಿಬಿಟ್ಟರಲ್ಲ ಎಂಬ ಸುದೀಪ್ ಅವರ ಪ್ರಶ್ನೆಗೆ, ಹೌದು ಸರ್, ಎಲ್ಲರೂ ಸೇರಿ ಹೊರಗೆ ಹಾಕಿಬಿಟ್ಟರು. ನಾನು ಹೋಗುವಾಗ ಎಲ್ಲರೂ ಬಂದು ಸಮಾಧಾನ ಮಾಡಿದರು ಆದರೆ ಯಾರೂ ಸಹ ನನ್ನ ಪರವಾಗಿ ದಿಟ್ಟ ನಿಲುವು ತೆಗೆದುಕೊಳ್ಳಲಿಲ್ಲ. ಈಗ ಒಳಗೆ ಹೋಗಿ ಕೇಳುತ್ತೀನಿ, ಯಾಕೆ ಹಾಗೆ ಮಾಡಿದ್ದೀರಿ ಎಂದು ಪ್ರಶ್ನೆ ಮಾಡುತ್ತೀನಿ, ನನ್ನ ಆಟ ನೋಡದೇ ಏಕೆ ಹೀಗೆ ಮಾಡಿದ್ದೀರಿ ಎಂದು ಪ್ರಶ್ನೆ ಮಾಡುತ್ತೀನಿ, ಚೆನ್ನಾಗಿ ಆಡುತ್ತೀನಿ’ ಎಂದಿದ್ದಾರೆ.

ಇದನ್ನೂ ಓದಿ : ಕಲಬುರಗಿ : ತಲೆ ಮೇಲೆ ಕಲ್ಲು ಎತ್ತಿಹಾಕಿ ಯುವಕನ ಬರ್ಬರ ಹತ್ಯೆ!

Btv Kannada
Author: Btv Kannada

Read More