ಬೆಂಗಳೂರು : ಲೋಕಾಯುಕ್ತ ರೇಡ್ನಲ್ಲಿ ಎಸ್ಕೇಪ್ ಆಗಿದ್ದ ದೇವನಹಳ್ಳಿ ಪೊಲೀಸ್ ಠಾಣೆಯ ಮಹಿಳಾ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಜಗದೇವಿ ಭೀಮಾಶಂಕರ್ ಸಾಲೋಟಗಿ ಅವರಿಗೆ ನಿರೀಕ್ಷಣಾ ಜಾಮೀನು ನೀಡಲು ಲೋಕಾಯುಕ್ತ ಕೋರ್ಟ್ ನಿರಾಕರಿಸಿದೆ. ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಅಪ್ರಾಪ್ತ ವಯಸ್ಕ ಬಾಲಕಿಯ ತಾಯಿಯಿಂದ ಆರೋಪಿಯ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲು ಅವರ ಸಹೋದ್ಯೋಗಿ 50,000 ರೂಪಾಯಿ ಲಂಚ ಪಡೆಯುತ್ತಿದ್ದಾಗ ಸಿಕ್ಕಿಬಿದ್ದ ನಂತರ ಪ್ರಕರಣ ದಾಖಲಿಸಲಾಗಿದೆ.
ಸಂತ್ರಸ್ತೆಯ ತಾಯಿಯಿಂದ ಅಕ್ರಮ ಲಂಚ ನಿರೀಕ್ಷಿಸುವುದು ನಿಜಕ್ಕೂ ಅಮಾನವೀಯ, ಸರ್ಕಾರಿ ಅಧಿಕಾರಿಯಿಂದ ಈ ಕೃತ್ಯ ಸಹಿಸಲು ಸಾಧ್ಯವಿಲ್ಲ ಎಂದು ನ್ಯಾಯಾಧೀಶ ಕೆ.ಎಂ. ರಾಧಾಕೃಷ್ಣ ಅವರು ಚೀಮಾರಿ ಹಾಕಿ, ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿದರು.
ಪೋಕ್ಸೋ ಪ್ರಕರಣದಲ್ಲಿ PSI ಜಗದೇವಿ 1ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು, ಈ ಹಿನ್ನೆಲೆ ಲೋಕಾಯುಕ್ತ ದೇವನಹಳ್ಳಿ ಠಾಣೆ ಮೇಲೆ ದಾಳಿ ನಡೆಸಿದ್ದರು. ಪ್ರಕರಣದಲ್ಲಿ ಚಾರ್ಜ್ ಶೀಟ್ ಬಲಿಷ್ಠವಾಗಿ ಮಾಡಲು PSI ಜಗದೇವಿ ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಅಡ್ವಾನ್ಸ್ 25 ಸಾವಿರ ಪಡೆದು ಉಳಿಕೆ 75 ಸಾವಿರ ಪಡೆಯುವ ವೇಳೆ ಲೋಕಾಯುಕ್ತ ರೇಡ್ ಮಾಡಿದೆ.
PSI ಜಗದೇವಿ, ಪಿಸಿ ಅಂಬರೀಶ್ಗೆ ಹಣ ಪಡೆಯಲು ಸೂಚಿಸಿದ್ದರು. ಪಿಸಿ ಅಂಬರೀಶ್ ಲೋಕಾ ಬಲೆಗೆ ಬೀಳ್ತಿದ್ದಂತೆ ಭ್ರಷ್ಟ ಜಗದೇವಿ ಎಸ್ಕೇಪ್ ಆಗಿದ್ದಾಳೆ. ಎ1 ಆರೋಪಿ ಪಿಎಸ್ಐ ಜಗದೇವಿ, ಎ2 ಆರೋಪಿ ಮಂಜುನಾಥ್, ಎ3 ಅಂಬರೀಶ್ ಪ್ರಕರಣದಲ್ಲಿ ಆರೋಪಿಗಳು.
ಇದನ್ನೂ ಓದಿ : ನಟ ಅನಿರುದ್ಧ ಜತ್ಕರ್ ಬರೆದಿರುವ “ಸಾಲುಗಳ ನಡುವೆ” ಪುಸ್ತಕ ಅನಾವರಣ!







