ಬೆಂಗಳೂರಲ್ಲಿ CCB ಪೊಲೀಸರ ಭರ್ಜರಿ ಕಾರ್ಯಾಚರಣೆ – ಬರೋಬ್ಬರಿ 7.80 ಕೋಟಿ ಮೌಲ್ಯದ ಡ್ರಗ್ಸ್ ಸೀಜ್.. ಆರೋಪಿಗಳು ಅರೆಸ್ಟ್!

ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ CCB ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಇಬ್ಬರು ವಿದೇಶಿ ಪ್ರಜೆಗಳನ್ನು ಬಂಧಿಸಿ, ಬರೋಬ್ಬರಿ 7.80 ಕೋಟಿ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದಿದ್ದಾರೆ. MDMA ಕ್ರಿಸ್ಟಲ್ 3.8 ಕೆಜಿ, MDMA ಬ್ರೌನ್ ಹಾಗೂ ವೈಟ್ ಡ್ರಗ್ಸ್, 42 ಗ್ರಾಂ 82 ಎಕ್ಸಟೆಸಿ ಮಾತ್ರೆ, 23 ಕೆಜಿ ಗಾಂಜಾ, 482 ಗ್ರಾಂ ಹೈಡ್ರೋ ಗಾಂಜಾ ಸೇರಿ ಒಟ್ಟು 9.93 ಕೋಟಿ ಮೌಲ್ಯದ ವಸ್ತುಗಳನ್ನು CCB ಪೊಲೀಸರು ಜಪ್ತಿ ಮಾಡಿದ್ದಾರೆ.

ಕೆವಿನ್ ರೋಜರ್, ಥಾಮಸ್ ನವೀದ್ ಚೀಮ್ ಬಂಧಿತ ಆರೋಪಿಗಳು. ಹೆಬ್ಬಗೋಡಿಯಲ್ಲಿ ಮನೆ ಮಾಡಿದ್ದ ಆರೋಪಿಗಳು ದೆಹಲಿ ಮತ್ತು ಮುಂಬೈನಿಂದ ನಶೆ ಪದಾರ್ಥಗಳನ್ನು ತರಿಸ್ತಿದ್ದರು.

ಮನೆಯಲ್ಲಿಯೇ ಲೋಕೇಷನ್ ಡ್ರಾಪ್ ಮಾಡಿ ಟೆಕ್ಕಿಗಳು, ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರಾಟ ಮಾಡ್ತಿದ್ದರು. ಇದೀಗ CCB ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ‘ಡ್ರಗ್ಸ್​’ ಖೆಡ್ಡಾಗೆ ಕೆಡಿವಿದ್ದಾರೆ. ಈ ಸಂಬಂಧ ಸಿಸಿಬಿ ಮತ್ತು ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಬೆಂಗಳೂರಲ್ಲಿ ಹಿಟ್ ಅಂಡ್ ರನ್​​ಗೆ ವಿದ್ಯಾರ್ಥಿನಿ ಬಲಿ!

Btv Kannada
Author: Btv Kannada

Read More