ಇನ್ನೋವಾ ಕಾರು-ಟಂಟಂ ಮುಖಾಮುಖಿ ಡಿಕ್ಕಿ – ಇಬ್ಬರ ದುರ್ಮರಣ!

ಬಾಗಲಕೋಟೆ : ಇನ್ನೋವಾ ಕಾರು-ಟಂಟಂ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಇಬ್ಬರು ಸಾವನ್ನಪ್ಪಿರುವ ಘಟನೆ ಬಾಗಲಕೋಟೆಯ ಬೀಳಗಿಯ ಅನಗವಾಡಿ ಬ್ರಿಡ್ಜ್ ಬಳಿ ನಡೆದಿದೆ. ಮಹೇಶ್ ನಾಯ್ಕರ್ (27) ಮೆಹಬೂಬ್ ಶೇಖ್‌ (30) ಮೃತ ದುರ್ದೈವಿಗಳು.

ಟಂಟಂನಲ್ಲಿದ್ದ ಐವರು ಬಾಗಲಕೋಟೆ ಕಡೆಗೆ ಬರ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಅಪಘಾತಕ್ಕೆ ಇನ್ನೋವಾ ಚಾಲಕನ ಅಜಾಗರೂಕತೆಯೇ ಕಾರಣವಾಗಿದ್ದು, ಮುಂದೆ ಹೋಗ್ತಿದ್ದ ಮಹಿಂದ್ರಾ ವಾಹನ ಡಿಕ್ಕಿ ತಪ್ಪಿಸಲು ಹೋಗಿ ಈ ಅಪಘಾತ ನಡೆದಿದೆ.

ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದು, ಗಂಭೀರವಾಗಿ ಗಾಯಗೊಂಡ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಕಲಾದಗಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ : ಹುಟ್ಟೂರ ಕರೆಯಲ್ಲಿ ಸಾಹಿತಿ ಎಸ್.ಎಲ್ ಭೈರಪ್ಪ ಚಿತಾಭಸ್ಮ ವಿಸರ್ಜನೆ!

Btv Kannada
Author: Btv Kannada

Read More