ಕನ್ನಡದ ಹಿರಿಯ ಸಾಹಿತಿ, ಪದ್ಮವಿಭೂಷಣ ಪುರಸ್ಕೃತ ಎಸ್ ಎಲ್ ಭೈರಪ್ಪನವರ ಚಿತಾಭಸ್ಮವನ್ನು ಭಾನುವಾರ ಹುಟ್ಟೂರು ಸಂತೆ ಶಿವರದ ಅಯ್ಯನಕರೆಗೆ ವಿಸರ್ಜಿಸಲಾಯಿತು.
ಶನಿವಾರ ಕಾವೇರಿ ನದಿಯಲ್ಲಿ ಸಂಪ್ರದಾಯದಂತೆ ಅಸ್ಥಿ ವಿಸರ್ಜನೆ ಮಾಡಿದ್ದ ಪುತ್ರರಾದ ರವಿಶಂಕರ್ ಹಾಗೂ ಉದಯ ಶಂಕರ್, ಭೈರಪ್ಪನವರ ಕನಸಿನ ಯೋಜನೆಯಿಂದ ತುಂಬಿರುವ ಗ್ರಾಮದ ಕೆರೆಯಲ್ಲಿ ಗ್ರಾಮಸ್ಥರೊಂದಿಗೆ ಸೇರಿ ತೆಪ್ಪದಲ್ಲಿ ತೆರಳಿ ಅಸ್ಥಿ ವಿಸರ್ಜನೆ ನೆರವೇರಿಸಿದರು.
ಪುರೋಹಿತರಾದ ಪ್ರಭಾಕರ್ ಜೋಯಿಸ್, ಅನಂತರಾಮ ಜೋಯಿಸ್, ವೇಣುಗೋಪಾಲ್, ಎಸ್.ಡಿ. ನಾಗರಾಜ್ ರಾವ್ ಬ್ರಾಹ್ಮಣ ಸಂಪ್ರದಾಯದಂತೆ ಚಿತಾಭಸ್ಮಕ್ಕೆ ಪೂಜೆ ಸಲ್ಲಿಸಿದರು. ನಂತರ ಮಂತ್ರ, ವೇದ ಘೋಷ, ಶಾಂತಿ ಮಂತ್ರಗಳನ್ನು ಪಠಿಸಲಾಯಿತು. ಚಿತಾಭಸ್ಮ ತಂದ ಉದಯಶಂಕರ್ ಅವರನ್ನು ಗ್ರಾಮಸ್ಥರು, ಪ್ರವೇಶದ್ವಾರದಲ್ಲೇ ಬರಮಾಡಿಕೊಂಡರು.
ಇದನ್ನೂ ಓದಿ : ಬಿಜೆಪಿಗಿಂತ ಕಾಂಗ್ರೆಸ್ ನಲ್ಲಿ ಕಮಿಷನ್ ಜಾಸ್ತಿ.. ಕಾಮಗಾರಿ ಬಾಕಿ ಹಣ ಬಿಡುಗಡೆ ಮಾಡಿಲ್ಲ – ಸಿಎಂಗೆ ರಾಜ್ಯ ಗುತ್ತಿಗೆದಾರರ ಸಂಘ ಪತ್ರ!
Author: Btv Kannada
Post Views: 450







