ಬೆಂಗಳೂರು : ಕಾರಿನ ಇಂಡಿಕೇಟರ್ ಹಾಕಿಲ್ಲ ಎಂದು ರೊಚ್ಚಿಗೆದ್ದ ಬೈಕ್ ಸವಾರನೋರ್ವ ಕ್ಯಾಬ್ ಚಾಲಕನ ಮೇಲೆ ಹಲ್ಲೆ ಮಾಡಿರುವ ಘಟನೆ ದಾಸರಹಳ್ಳಿ ಮೆಟ್ರೋ ನಿಲ್ದಾಣದ ಬಳಿ ನಡೆದಿದೆ. ಕ್ಯಾಬ್ನಲ್ಲಿ ಯುವತಿಯರು ಇರೋದನ್ನೂ ಲೆಕ್ಕಿಸದೆ ಬೈಕ್ ಸವಾರ, ನಿನ್ನ ಕಾರಲ್ಲಿ ಇಂಡಿಕೇಟರ್ ಇಲ್ವಾ? ಯಾಕೆ ಇಂಡಿಕೇಟರ್ ಹಾಕಿಲ್ಲ ಮಗ್ನೇ ಅಂಥ ಹೇಳಿ ಚಾಲಕನ ಮೇಲೆ ಮನಬಂಥಂತೆ ಹಲ್ಲೆ ಮಾಡಿದ್ದಾನೆ.

ಕ್ಯಾಬ್ನಲ್ಲಿ ಹಿಂಬದಿ ಕೂತಿದ್ದ ಯುವತಿಯರು ವೀಡಿಯೋ ರೆಕಾರ್ಡ್ ಮಾಡಿಕೊಂಡಿದ್ದು, ಚಾಲಕ ಲೆಫ್ಟ್ಗೆ ತೆಗೆಯುವಾಗ ಇಂಡಿಕೇಟರ್ ಹಾಕಿಲ್ಲ ಎಂದು ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆಗೈದಿದ್ದಾನೆ. ಈ ಬಗ್ಗೆ ಹಲ್ಲೆಗೊಳಗಾದ ಚಾಲಕ ಪೊಲೀಸರಿಗೆ ಮಾಹಿತಿ ನೀಡಿದ್ದು, ಬೈಕ್ ಚಾಲಕನ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ : ಶಿಕ್ಷಕಿಗೆ ಅಶ್ಲೀಲ ಕಮೆಂಟ್, ಅತ್ಯಾಚಾರ ಬೆದರಿಕೆ – 12 ಮಂದಿ ದರ್ಶನ್ ಫ್ಯಾನ್ಸ್ ವಿರುದ್ಧ FIR!
Author: Btv Kannada
Post Views: 529







