ದೇವನಹಳ್ಳಿಯಲ್ಲಿ ಗಣೇಶ ಮೂರ್ತಿ ವಿಸರ್ಜನೆ ವೇಳೆ ಗಲಾಟೆ – ವಕೀಲನ ಮೇಲೆ ಮನಸೋಇಚ್ಛೆ ಹಲ್ಲೆಗೈದ ಕಿಡಿಗೇಡಿಗಳು!

ದೇವನಹಳ್ಳಿ : ಗಣೇಶ ಮೂರ್ತಿ ವಿಸರ್ಜನೆ ವೇಳೆ ಕಿಡಿಗೇಡಿಗಳು ಕ್ಷುಲ್ಲಕ ಕಾರಣಕ್ಕೆ ವಕೀಲನ ಮೇಲೆ ಮನಸೋಇಚ್ಚೆ ಹಲ್ಲೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆವತಿ ಗ್ರಾಮದಲ್ಲಿ ನಡೆದಿದೆ.

ಆವತಿ ಗ್ರಾಮದ ಅಂಬೇಡ್ಕರ್ ಬಡಾವಣೆ ಸಂವಿಧಾನ ಶಿಲ್ಪಿ ಯುವಕರ ಬಳಗದಿಂದ ಗಣೇಶ ಮೂರ್ತಿ ವಿಸರ್ಜನ ಕಾರ್ಯಕ್ರಮ ನಡೆಯುತ್ತಿತ್ತು, ಈ ವೇಳೆ ವಕೀಲ ತ್ರಿಮೂರ್ತಿ ಎಂಬುವವರ ಮೇಲೆ ಕಿಡಿಗೇಡಿಗಳು ಹಿಗ್ಗಾಮುಗ್ಗಾ ಹಲ್ಲೆ ಮಾಡಿದ್ದಾರೆ.

ವೆಂಕಟೇಶ್, ಪುನೀತ್, ಜೀವನ್, ಮದನ್ & ಮನೋಜ್ ಎಂಬುವವರು ಹಲ್ಲೆ ಮಾಡಿದ್ದು, ವಕೀಲ ತ್ರಿಮೂರ್ತಿ ವಿಜಯಪುರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತ್ರಿಮೂರ್ತಿ ದೂರಿನ ಮೇರೆಗೆ ವಿಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಭಾರತಕ್ಕೆ ಏಷ್ಯಾಕಪ್​ ಗೆಲುವಿನ ‘ತಿಲಕ’ – ಪಾಕಿಸ್ತಾನವನ್ನು ಮಣಿಸಿ 9ನೇ ಬಾರಿಗೆ ಏಷ್ಯಾಕಪ್ ಎತ್ತಿಹಿಡಿದ ಟೀಂ ಇಂಡಿಯಾ!

Btv Kannada
Author: Btv Kannada

Read More