ಭಾರತಕ್ಕೆ ಏಷ್ಯಾಕಪ್​ ಗೆಲುವಿನ ‘ತಿಲಕ’ – ಪಾಕಿಸ್ತಾನವನ್ನು ಮಣಿಸಿ 9ನೇ ಬಾರಿಗೆ ಏಷ್ಯಾಕಪ್ ಎತ್ತಿಹಿಡಿದ ಟೀಂ ಇಂಡಿಯಾ!

ಟೀಂ ಇಂಡಿಯಾ ತನ್ನ ಹಾಲಿ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ದುಬೈನಲ್ಲಿ ನಡೆದ ಏಷ್ಯಾಕಪ್ ಫೈನಲ್​ನಲ್ಲಿ ಪಾಕಿಸ್ತಾನವನ್ನು ರೋಚಕ ರೀತಿಯಲ್ಲಿ ಸೋಲಿಸಿ 9ನೇ ಬಾರಿಗೆ ಏಷ್ಯಾಕಪ್ ಗೆದ್ದುಕೊಂಡಿತು.

ಪಾಕಿಸ್ತಾನ ನೀಡಿದ್ದ 147 ರನ್​ಗಳ ಗುರಿಯನ್ನ ಬೆನ್ನಟ್ಟಿದ ಟೀಮ್ ಇಂಡಿಯಾ ಇಡೀ ಟೂರ್ನಿಯಲ್ಲೇ ಅನುಭವಿಸದಂತಹ ಭಾರೀ ಆಘಾತ ಎದುರಿಸಿತು. ಗೋಲ್ಡನ್ ಫಾರ್ಮ್​ನಲ್ಲಿದ್ದ ಆರಂಭಿಕ ಬ್ಯಾಟರ್ ಅಭಿಷೇಕ್​ ಶರ್ಮಾ ಕೇವಲ 6 ಎಸೆತಗಳಲ್ಲಿ 5 ರನ್​ಗಳಿಸಿ ಫಹೀಮ್​ ಅಶ್ರಫ್ ಬೌಲಿಂಗ್​​ನಲ್ಲಿ ರೌಫ್​ಗೆ ಕ್ಯಾಚ್​ ನೀಡಿ ಔಟ್ ಆದರು. ಇಡೀ ಟೂರ್ನಿಯಲ್ಲಿ ಇದು ಅವರ ಮೊದಲ ಸಿಂಗಲ್ ಡಿಜಿಟ್ ವೈಫಲ್ಯವಾಯಿತು.

ಇನ್ನು ನಾಯಕ ಸೂರ್ಯಕುಮಾರ್ ಯಾದವ್​ (1) ಹಾಗೂ ಶುಭ್​ಮನ್ ಗಿಲ್ (12) ತಮ್ಮ ವೈಫಲ್ಯವನ್ನ ಫೈನಲ್​ನಲ್ಲೂ ಮುಂದುವರಿಸಿದರು. ಸೂರ್ಯ ಶಾಹೀನ್ ಆಫ್ರಿದಿ ಬೌಲಿಂಗ್​​ನಲ್ಲಿ ಸಲ್ಮಾನ್ ಅಲಿ ಆಘಾಗೆ ಕ್ಯಾಚ್ ನೀಡಿ ಔಟ್ ಆದರೆ, ಗಿಲ್ 12 ರನ್​ಗಳಿಸಿ ಫಹೀಮ್ ಬೌಲಿಂಗ್​​ನಲ್ಲಿ ರೌಫ್​ಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿಕೊಂಡರು.

ತಂಡದ ಮೊತ್ತ 20 ರನ್​ಗಳಾಗುವಷ್ಟರಲ್ಲಿ ಭಾರತ ತಂಡ 3 ವಿಕೆಟ್ ಕಳೆದುಕೊಂಡು ಹೀನಾಯ ಸ್ಥಿತಿಯಲ್ಲಿತ್ತು. ಆದರೆ 4ನೇ ವಿಕೆಟ್​ಗೆ ಜೊತೆಯಾದ ತಿಲಕ್ ವರ್ಮಾ ಹಾಗೂ ಸಂಜು ಸ್ಯಾಮ್ಸನ್​ 50 ಎಸೆತಗಳಲ್ಲಿ 57 ರನ್​ಗಳಿಸಿದರು. ಈ ಜೋಡಿ ವಿಕೆಟ್ ಉಳಿಸಿಕೊಂಡು ಜಾಗೃತವಾಗಿ ರನ್​ಗತಿ ಏರಿಸಿದರು. ಆದರೆ ಸಂಜು ಸ್ಯಾಮ್ಸನ್ 21 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ಸಹಿತ 24 ರನ್ಗಳಿಸಿ ಅಬ್ರಾರ್ ಅಹ್ಮದ್​ ಬೌಲಿಂಗ್​ನಲ್ಲಿ ಫಹೀಮ್ ಅಶ್ರಫ್​ಗೆ ಕ್ಯಾಚ್​ ನೀಡಿ ಔಟ್ ಆದರು.

ಇದನ್ನೂ ಓದಿ : ‘ಬಿಗ್​​ಬಾಸ್ ಸೀಸನ್ 12’ ಗ್ರ್ಯಾಂಡ್ ಓಪನಿಂಗ್ – ದೊಡ್ಮನೆಗೆ ಎಂಟ್ರಿ ಕೊಟ್ಟ 19 ಘಟಾನುಘಟಿ ಸ್ಪರ್ಧಿಗಳು ಇವರೇ!

Btv Kannada
Author: Btv Kannada

Read More