ಮಾದಕ ವಸ್ತು ಖರೀದಿ ಆರೋಪ – ನಟಿ ಸಂಜನಾ ಗರ್ಲಾನಿಗೆ ಸುಪ್ರೀಂಕೋರ್ಟ್​ನಿಂದ ಬಿಗ್ ಶಾಕ್!

ಬೆಂಗಳೂರು : ಮಾದಕ ವಸ್ತುಗಳನ್ನು ಖರೀದಿಸಿದ ಆರೋಪದಡಿ ದಾಖಲಾಗಿದ್ದ ಕೇಸಲ್ಲಿ ಹೈಕೋರ್ಟ್​ನಿಂದ ರಿಲೀಫ್ ಪಡೆದಿದ್ದ ನಟಿ ಸಂಜನಾ ಗಲ್ರಾನಿಗೆ ಇದೀಗ ಸುಪ್ರೀಂ ಕೋರ್ಟ್ ಬಿಗ್ ಶಾಕ್ ನೀಡಿದೆ. ಕರ್ನಾಟಕ ಸರ್ಕಾರ ಸಲ್ಲಿಸಿದ್ದ ವಿಶೇಷ ಮೇಲ್ಮನವಿಯ ವಿಚಾರಣೆ ನಡೆಸಿದ ಸುಪ್ರೀಂ ನಟಿ ಸಂಜನಾ ಗಲ್ರಾನಿ ಮತ್ತು ಗ್ಯಾಂಗ್​ನಿಂದ ಪ್ರತಿಕ್ರಿಯೆ ಕೋರಿ ನೋಟಿಸ್ ಜಾರಿ ಮಾಡಿದೆ.

ಪಂಚತಾರಾ ಪಾರ್ಟಿಗಳಿಗಾಗಿ ವಿವಿಧ ದೇಶಗಳಿಂದ ಮಾದಕ ವಸ್ತುಗಳನ್ನು ಖರೀದಿಸಿದ ಆರೋಪದಡಿ ಸಂಜನಾ ಗಲ್ರಾನಿ & ಗ್ಯಾಂಗ್ ವಿರುದ್ಧ ಕೇಸ್ ದಾಖಲಾಗಿತ್ತು. ಈ ಪ್ರಕರಣ ಸಂಬಂಧ ನಟಿಗೆ ಹೈಕೋರ್ಟ್​ನಿಂದ ಫುಲ್ ರಿಲೀಫ್ ಸಿಕ್ಕಿತ್ತು. ಆದರೆ 2024 ಮಾರ್ಚ್25 ಹೈಕೋರ್ಟ್ ತೀರ್ಪಿನ ಸಿಂಧುತ್ವವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.

ಈ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೋಯ್ಮಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠ ವಿಚಾರಣೆ ನಡೆಸಿತು. ವಾದ-ಪ್ರತಿವಾದ ಆಲಿಸಿದ ಪೀಠ, ಹೈಕೋರ್ಟ್ ನೀಡಿದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ಕುರಿತು ನಟಿಯ ಪ್ರತಿಕ್ರಿಯೆ ಕೇಳಿ ನೋಟಿಸ್ ನೀಡಲು ತೀರ್ಮಾನಿಸಿತು.

ಇದನ್ನೂ ಓದಿ : ವಿಜಯನಗರದಲ್ಲಿ ಸಿಲಿಂಡರ್ ಸ್ಫೋಟ – ಒಂದೇ ಕುಟುಂಬದ 8 ಮಂದಿಗೆ ಗಾಯ!

Btv Kannada
Author: Btv Kannada

Read More