ಮಹಿಳೆ ಮೇಲೆ “ಮಾರ್ವಾಡಿ” ಗ್ಯಾಂಗ್ ವಿಕೃತಿ ಕೇಸ್ – ಕಿರಾತಕರ ವಿರುದ್ಧ ಕಠಿಣ ಕ್ರಮಕ್ಕೆ ಮಹಿಳಾ ಆಯೋಗ ಮನವಿ!

ಬೆಂಗಳೂರು : ಸೀರೆ ಕದ್ದಿದ್ದಾಳೆಂದು ಆರೋಪಿಸಿ ಬಡ ಮಹಿಳೆಗೆ ನಡುರಸ್ತೆಯಲ್ಲೇ ಬೂಟುಗಾಲಿನಿಂದ ಒದ್ದು ವಿಕೃತಿ ಮೆರೆದ ಮಾಲೀಕ ಉಮೇದ್ ರಾಮ್ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ. ಇದೀಗ ಅವಿನ್ಯೂ ರಸ್ತೆಯ ‘ಮಾಯಾ ಸಿಲ್ಕ್’ ಮಾಲೀಕ ಉಮೇದ್ ರಾಮ್ ಮತ್ತು ಮಹೇಂದ್ರ ಸಿರ್ವಿ ಮೇಲೆ ಕ್ರಮ ಕೈಗೊಳ್ಳಲು ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಆಗ್ರಹಿಸಿದ್ದಾರೆ.

ಈ ಸಂಬಂಧ ಡಾ.ನಾಗಲಕ್ಷ್ಮೀ ಚೌಧರಿ ಅವರು ಉಪ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದು, ಮಹಿಳೆ ಮೇಲೆ ನಡೆದಿರುವ ಅಮಾನುಷ ಕೃತ್ಯ ಮಹಿಳಾ ಆಯೋಗ ಖಂಡಿಸುತ್ತದೆ. ಆರೋಪಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಿ, ಕೈಗೊಂಡ ಕಾನೂನು ಕ್ರಮದ ವರದಿ ಮಹಿಳಾ ಆಯೋಗಕ್ಕೆ ಕಳುಹಿಸುವಂತೆ ಮನವಿ ಮಾಡಿದ್ದಾರೆ.

ಈ ಬೆನ್ನಲ್ಲೇ ಮಾರ್ವಾಡಿ ರೌಡಿಸಂ ಗ್ಯಾಂಗ್ ಸದಸ್ಯರ​ ವಿರುದ್ಧ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. BNS 74, 76, 79, 115(2), 133, 126(2), 351(2), 3(5) ಅಡಿ ಅಂಗಡಿ ಮಾಲೀಕ ಉಮೇದ್ ರಾಮ್ & ಮಹೇಂದ್ರ ಸಿರ್ವಿ FIR ದಾಖಲಾಗಿದೆ. ಇದೀಗ ಕನಿಷ್ಟ 1 ವರ್ಷ ಜೈಲಿನಿಂದ ಹೊರ ಬರದಂತೆ ಪೊಲೀಸರು ಕ್ರಮ ಕೈಗೊಳ್ಳಿ, ಅವಿನ್ಯೂ ರೋಡ್​ನ ‘ಮಾರ್ವಾಡಿ’ ರೌಡಿಸಂ ನಿಲ್ಲಿಸುವಂತೆ ಜನರು ಆಗ್ರಹಿಸಿದ್ದಾರೆ.

ಇದನ್ನೂ ಓದಿ : ಖಾಸಗಿ ಪಿಜಿಯಲ್ಲಿ ಯುವತಿ ಅನುಮಾನಾಸ್ಪದ ಸಾವು – ಶವ ಕಂಡು ಹೊರಗೆ ಓಡಿದ ವಿದ್ಯಾರ್ಥಿನಿಯರು!

Btv Kannada
Author: Btv Kannada

Read More