ಬೆಂಗಳೂರು : ಲೀವಿಂಗ್ ಟುಗೆದರ್ನಲ್ಲಿದ್ದ ಪಾಪಿ ಪ್ರಿಯಕರನೊಬ್ಬ ಯುವತಿಗೆ ಚಾಕು ಇರಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ರೇಖಾ (28) ಚಾಕು ಇರಿತಕ್ಕೊಳಗಾದ ಯುವತಿ.
ಪ್ರಿಯಕರ ಲೋಕೇಶ್ ರೇಖಾಗೆ ಚಾಕುವಿನಿಂದ ಏಕಾಏಕಿ ಅಟ್ಯಾಕ್ ಮಾಡಿದ್ದಾನೆ. ರೇಖಾ ಗಾರ್ಮೆಂಟ್ಸ್ ಒಂದರಲ್ಲಿ ಕೆಲಸ ಮಾಡ್ತಿದ್ದು, ಇತ್ತೀಚಿಗೆ ಲೋಕೇಶನ ಜೊತೆ ಕಿರಿಕ್ ತೆಗೆದಿದ್ದಳು. ತಾನು ಬೇರೊಂದು ಮನೆ ಮಾಡ್ಕೊಂಡು ಬದುಕು ಕಟ್ಟಿಕೊಳ್ತೀನಿ ಅಂದಿದ್ದಳು. ಇದರಿಂದ ಲೋಕೇಶ ತಲೆ ಕೆಡಿಸಿಕೊಂಡಿದ್ದು, ರೇಖಾಳ ಶೀಲ ಶಂಕಿಸಿ ಮುಹೂರ್ತವಿಟ್ಟಿದ್ದಾನೆ.

ಕಿರಿಕ್ನ ಅಸಲೀ ಕಾರಣ ತಿಳಿಯೋಕೆ ರೇಖಾಳನ್ನ ಫಾಲೋ ಮಾಡ್ತಿದ್ದ ಲೋಕೇಶನಿಗೆ ರೇಖಾ ಬೇರೊಬ್ಬರ ಜೊತೆ ಸಲುಗೆಯಲ್ಲಿರೋದು ಗೊತ್ತಾಗಿತ್ತು. ಅದೇ ಕಾರಣಕ್ಕೆ ಚಾಕು ಇರಿದು ರೇಖಾಳನ್ನ ಕೊಲೆ ಮಾಡಲು ಮುಂದಾಗಿದ್ದಾನೆ. ಇದೀಗ ಚಾಕು ಇರಿತಕ್ಕೊಳಗಾದ ರೇಖಾಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡಿಯುತ್ತಿದ್ದಾಳೆ. ಸದ್ಯ ಕಾಮಾಕ್ಷಿಪಾಳ್ಯ ಪೊಲೀಸರಿಂದ ಆರೋಪಿಗಾಗಿ ತಲಾಶ್ ನಡೆಯುತ್ತಿದೆ.
ಇದನ್ನೂ ಓದಿ : ಸಂಸದ ಡಾ.ಕೆ ಸುಧಾಕರ್ ಪತ್ನಿಗೆ ಡಿಜಿಟಲ್ ಅರೆಸ್ಟ್ – ಬರೋಬ್ಬರಿ 14 ಲಕ್ಷ ಹಣ ವಂಚಿಸಿದ ಸೈಬರ್ ಕಳ್ಳರು!







