ನೆಲಮಂಗಲ : ನಿರ್ಮಾಣ ಹಂತದ ಕಟ್ಟಡದ 2ನೇ ಮಹಡಿಯಿಂದ ಆಯತಪ್ಪಿ ಕೆಳಗೆ ಬಿದ್ದು ಕಾರ್ಮಿಕ ಸಾವನ್ನಪ್ಪಿರುವ ಘಟನೆ ನೆಲಮಂಗಲದ ಗೆಜ್ಜಗದಹಳ್ಳಿ ಗ್ರಾಮದಲ್ಲಿ ನಡೆದಿದೆ.

ಯಾದಗಿರಿ ಜಿಲ್ಲೆಯ ಗೋಪಾಲಪುರ ಗ್ರಾಮದ 34 ವರ್ಷದ ಬೀರಪ್ಪ ಮೃತ ದುರ್ದೈವಿ. ಕಳೆದ 8 ವರ್ಷಗಳಿಂದ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ಬೀರಪ್ಪ ಅವರು, ಮನೆಯ ಸೆಂಟ್ರಿಂಗ್ ಕಳಚುವಾಗ ಈ ದುರ್ಘಟನೆ ಸಂಭವಿಸಿದೆ.
ಮೃತರಿಗೆ ಹೆಂಡತಿ ಮತ್ತು ಇಬ್ಬರು ಮಕ್ಕಳಿದ್ದಾರೆ. ಈ ಕುರಿತು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ದಸರಾ ಹಬ್ಬಕ್ಕೆ KSRTCಯಿಂದ 2300 ಹೆಚ್ಚುವರಿ ಬಸ್ ವ್ಯವಸ್ಥೆ.. ಪ್ರವಾಸಿಗರಿಗೆ ಸ್ಪೆಷಲ್ ಪ್ಯಾಕೇಜ್!
Author: Btv Kannada
Post Views: 403







