‘ಕೆಲ್ಸ ಮಾಡೋ ಮಗನೇ’ ಅಂದಿದ್ದಕ್ಕೆ ಅಪ್ಪನನ್ನೇ ಕೊಂದೇಬಿಟ್ಟ.. ಪಾಪಿ ಮಗನ ಕ್ರೌರ್ಯ ಬಯಲಾಗಿದ್ದೇ ರೋಚಕ!

ಬೆಂಗಳೂರು : ಕೆಲ್ಸ ಮಾಡೋ ಮಗನೇ ಅಂದಿದ್ದಕ್ಕೆ ಸ್ನೇಹಿತನ ಜೊತೆ ಸೇರಿ ಅಪ್ಪನನ್ನೇ ಮಗನೇ ಕೊಲೆ ಮಾಡಿರೋ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಅಷ್ಟೇ ಅಲ್ಲದೆ, ಕೊಲೆ ಮಾಡಿದ ಬಳಿಕ ಅಪ್ಪ ಹ್ಯಾಂಗ್ ಮಾಡ್ಕೊಂಡ್ರು ಅಂತ ಈ ಪಾಪಿ ಮಗ ಡ್ರಾಮಾ ಮಾಡಿದ್ದಾನೆ. ಹೆತ್ತಪ್ಪನ ಹೆಣದ ಮುಂದೆ ಕೂತು ಕಣ್ಣೀರು ಹಾಕಿದ್ದ ಮಗ ಇದೀಗ ಜೈಲುಪಾಲಾಗಿದ್ದಾನೆ.

ಮೃತ ಮಂಜು
ಮೃತ ಮಂಜು

ಬೆಂಗಳೂರಿನ ಬಾಗಲಗುಂಟೆ ಠಾಣಾ ವ್ಯಾಪ್ತಿಯಲ್ಲಿ ಸೆಪ್ಟೆಂಬರ್ 3ನೇ ತಾರೀಕು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ದಾಸರಹಳ್ಳಿಯಲ್ಲಿ ಮಂಜು ಎಂಬವರು ಅನುಮಾನಾಸ್ಪದ ರೀತಿಯಲ್ಲಿ ಕೊಲೆಯಾಗಿರ್ತಾರೆ. ನೇಣು ಬಿಗಿದ ಸ್ಥಿತಿಯಲ್ಲಿ ಮಂಜು ಶವ ಪತ್ತೆಯಾಗಿರುತ್ತೆ. ಆ ಬಳಿಕ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗುತ್ತೆ.

ಮನೋಜ್
ಮನೋಜ್

ಆದ್ರೆ, ಪೋಸ್ಟ್ ಮಾರ್ಟಮ್ ರಿಪೋರ್ಟ್ ಬರ್ತಿದ್ದಂತೆ ಇದು ಆತ್ಮಹತ್ಯೆಯಲ್ಲ, ಕೊಲೆ ಅನ್ನೋದು ಖಚಿತವಾಗುತ್ತೆ. ಈ ವೇಳೆ ಪೊಲೀಸರು ಮೃತ ಮಂಜುವಿನ ಹಿರಿಯ ಮಗ ಮನೋಜ್ ನನ್ನ ಕರೆಸಿ‌ ವಿಚಾರಣೆ ನಡೆಸ್ತಾರೆ. ಈ ವೇಳೆ ಕೊಲೆಗಾರ ಮನೋಜ ಸ್ನೇಹಿತ ಪ್ರವೀಣನ ಜೊತೆ ಸೇರಿ ತಂದೆ ಕೊಲೆ ಮಾಡ್ದೆ ಅಂತ ತಪ್ಪೊಪ್ಪಿಕೊಂಡಿದ್ದಾನೆ. ತಂದೆ ಪದೇ ಪದೇ ಕೆಲ್ಸ ಮಾಡು ಅಂತ ಪೀಡಿಸ್ತಿದ್ದ, ಯಾರ್ ಸರ್ ಕೆಲ್ಸ ಮಾಡ್ತಾರೆ ಅದಕ್ಕೆ ಅಪ್ಪಂಗೆ ಸ್ಕೆಚ್ ಹಾಕ್ದೆ. ಅದೇ ರೀತಿ ಎಣ್ಣೆ ಹಾಕ್ಕೊಂಡೋಗಿ ಅಪ್ಪನ ಕತ್ತು ಬಿಗಿದು ಕೊಲೆ ಮಾಡ್ದೆ ಎಂದು  ಪೊಲೀಸರ ಮುಂದೆಯೇ ಮನೋಜ್ ಸ್ಟೇಟ್ಮೆಂಟ್ ಕೊಟ್ಟಿದ್ದಾನೆ. ಸದ್ಯ ಘಟನಾ ಸಂಬಂಧ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಜೈಲಿಗಟ್ಟಿದ್ದಾರೆ.

ಪ್ರವೀಣ
ಪ್ರವೀಣ

ಇದನ್ನೂ ಓದಿ : ‘ಈಸ್ಟ್​​ ಪೋಸ್ಟ್​​’ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಹೊಡೆದಾಟ ಕೇಸ್​ – ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಫಸ್ಟ್​ ರಿಯಾಕ್ಷನ್​!

Btv Kannada
Author: Btv Kannada

Read More