ಸರ್ಕಾರದ ಕ್ರಮ ಪ್ರಶ್ನಿಸಿ IPS ಅಲೋಕ್ ಕುಮಾರ್ ಅರ್ಜಿ – ಡಿಜಿಪಿಯಾಗಿ ಉಮೇಶ್ ಕುಮಾರ್, ಅರುಣ್ ಚಕ್ರವರ್ತಿ ಬಡ್ತಿಗೆ CAT ತಡೆ!

ಬೆಂಗಳೂರು : ಹಿರಿಯ IPS ಅಧಿಕಾರಿ ಅಲೋಕ್ ಕುಮಾರ್ ಅವರಿಗೆ ಸರ್ಕಾರ ಬಡ್ತಿ ನೀಡದೇ ಕಿರಿಯ ಅಧಿಕಾರಿಗಳಾಗಿದ್ದ ಉಮೇಶ್ ಕುಮಾರ್ ಹಾಗೂ ಅರುಣ್ ಚಕ್ರವರ್ತಿ ಅವರನ್ನು ಡಿಜಿಪಿಯಾಗಿ ಬಡ್ತಿ ನೀಡಿ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ CAT (ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ) ತಡೆ ನೀಡಿದೆ.

ಡಿಜಿಪಿ ಹುದ್ದೆಯ ಆಕಾಂಕ್ಷಿಯಾಗಿದ್ದ ಅಲೋಕ್ ಕುಮಾರ್, ತನಗೆ ಸೇವಾ ಹಿರಿತನವಿದ್ದರೂ ಸರ್ಕಾರ ತನ್ನನ್ನು ಪರಿಗಣಿಸದೇ ತನಗಿಂತ ಕಿರಿಯರಾದ ಉಮೇಶ್ ಕುಮಾರ್ ಹಾಗೂ ಅರುಣ್ ಚಕ್ರವರ್ತಿ ಅವರಿಗೆ ನೀಡಿದ್ದ ಬಡ್ತಿಯನ್ನು ಪ್ರಶ್ನಿಸಿ CAT ಮೊರೆ ಹೋಗಿದ್ದರು. ಅಲೋಕ್ ಕುಮಾ‌ರ್ ಅವರ ವಿರುದ್ಧ ಇಲಾಖಾ ವಿಚಾರಣೆ ಬಾಕಿಯಿರುವ ಹಿನ್ನೆಲೆಯಲ್ಲಿ ಇದನ್ನು ಮುಂದಿಟ್ಟು ರಾಜ್ಯ ಸರ್ಕಾರ ಅವರಿಗೆ ಮುಂಬಡ್ತಿ ನೀಡಿರಲಿಲ್ಲ. ಅಲೋಕ್ ಕುಮಾ‌ರ್ ಉಪೇಕ್ಷಿಸಿ ಡಿಜಿಪಿಯಾಗಿ ಉಮೇಶ್ ಕುಮಾರ್ ಹಾಗೂ ಅರುಣ್ ಚಕ್ರವರ್ತಿಯವರಿಗೆ ಸರ್ಕಾರ ಬಡ್ತಿ ನೀಡಿತ್ತು.

ಇದನ್ನು IPS ಅಧಿಕಾರಿ ಅಲೋಕ್ ಕುಮಾರ್ ಪ್ರಶ್ನಿಸಿ ಸಿಎಟಿಯಲ್ಲಿ  ಅರ್ಜಿ ಸಲ್ಲಿಸಿದ್ದರು. CATಯ ಇಬ್ಬರು ನ್ಯಾಯಮೂರ್ತಿಗಳು ಅಲೋಕ್ ಕುಮಾರ್ ಅರ್ಜಿ ಬಗ್ಗೆ ವಿಭಿನ್ನ ರೀತಿಯ ತೀರ್ಪು ನೀಡಿದ್ದಾರೆ. CATಯ ಮೂರನೇ ನ್ಯಾಯಮೂರ್ತಿ ಇಲಾಖೆ ವಿಚಾರಣೆ ಬಗ್ಗೆ ತೀರ್ಮಾನಿಸಬೇಕಿದೆ. ಈ ನಡುವೆ CAT ಡಿಜಿಪಿಯಾಗಿ ನೇಮಕಗೊಂಡಿದ್ದ ಉಮೇಶ್ ಕುಮಾರ್ ಹಾಗೂ ಅರುಣ್ ಚಕ್ರವರ್ತಿ ಅವರ ಬಡ್ತಿಗೆ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ.

ಇದನ್ನೂ ಓದಿ : ಸುಪ್ರೀಂ ಅಂಗಳಕ್ಕೆ ತಲುಪಿದ ದಸರಾ ಉದ್ಘಾಟನೆ ವಿವಾದ – ನಾಳೆ ತುರ್ತು ಅರ್ಜಿ ವಿಚಾರಣೆ!

Btv Kannada
Author: Btv Kannada

Read More