ಅಕ್ಷಯ್ ಕುಮಾರ್ ನಟನೆಯ ಜಾಲಿ LLB 3 ಸಿನಿಮಾ ಪ್ರದರ್ಶನಕ್ಕೆ ತಡೆ ಕೋರಿ ಸಯೀದಾ ನಿಲೋಫರ್ ಎಂಬುವವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಇದೀಗ ಹೈಕೋರ್ಟ್ ಪಿಐಎಲ್ ಅರ್ಜಿ ವಜಾಗೊಳಿಸಿ ಸಯೀದಾ ನಿಲೋಫರ್ಗೆ 50 ಸಾವಿರ ದಂಡ ವಿಧಿಸಿದೆ.

ಸಿನಿಮಾದಲ್ಲಿ ವಕೀಲರು ಹಾಗೂ ನ್ಯಾಯಾಂಗದ ಬಗ್ಗೆ ಆಕ್ಷೇಪಾರ್ಹ ಸಂಭಾಷಣೆ ಬಳಸಲಾಗಿದೆ. ಹೀಗಾಗಿ ಸಿನಿಮಾ ಪ್ರದರ್ಶನಕ್ಕೆ ತಡೆ ನೀಡಬೇಕು ಎಂದು ಸಯೀದಾ ನಿಲೋಫರ್ ಎಂಬುವವರು ಅರ್ಜಿ ಸಲ್ಲಿಕೆ ಮಾಡಿದ್ದರು. ನಟ ಅಕ್ಷಯ್ ಕುಮಾರ್, ಅರ್ಷದ್ ವಾರ್ಸಿ, ನಿರ್ದೇಶಕ ಸುಭಾಷ್ ಕಪೂರ್ ಹಾಗೂ ನಿರ್ಮಾಣ ಸಂಸ್ಥೆ ವಿರುದ್ಧ ಕ್ರಮಕ್ಕೆ ಮನವಿ ಮಾಡಿದ್ದರು.
ಇದೀಗ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಾದ ವಿಭು ಬಕ್ರು ಅವರು ಅರ್ಜಿ ವಜಾಗೊಳಿಸಿ, ಸಯಿದಾ ನಿಲೋಫರ್ಗೆ 50 ಸಾವಿರ ದಂಡ ವಿಧಿಸಿದ್ದಾರೆ.
ಇದನ್ನೂ ಓದಿ : ಆಳಂದ ಕ್ಷೇತ್ರದಲ್ಲೂ ಮತಗಳ್ಳತನ.. 6000 ಮತದಾರರ ಹೆಸರನ್ನೇ ಡಿಲೀಟ್ ಮಾಡಲಾಗಿದೆ – ರಾಹುಲ್ ಗಾಂಧಿ ಗಂಭೀರ ಆರೋಪ!
Author: Btv Kannada
Post Views: 320







