ಬೆಂಗಳೂರು : ಮಾಜಿ ಸಿಎಂ ಡಿ.ವಿ. ಸದಾನಂದ ಗೌಡ ಅವರ ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದ್ದು, ಸೈಬರ್ ಕಳ್ಳರು 3 ಲಕ್ಷ ರೂ. ಹಣವನ್ನು ದೋಚಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ 75ನೇ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಆರ್‌ಎಂವಿ ಎಕ್ಸ್‌ಟೆನ್ಷನ್‌ನ ಬಿಬಿಎಂಪಿ ಪಾರ್ಕ್‌ನಲ್ಲಿ ಆಯೋಜಿಸಿದ್ದ75 ಪೌರ ಕಾರ್ಮಿಕರರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಈ ಬಗ್ಗೆ ಮಾತನಾಡಿದ್ದಾರೆ.
ಹೌದು.. ಡಿ.ವಿ. ಸದಾನಂದ ಗೌಡ ಅವರ 3 ಬ್ಯಾಂಕ್ ಅಕೌಂಟ್ ಹ್ಯಾಕ್ ಮಾಡಿರುವ ಸೈಬರ್ ಕಳ್ಳರು, ಅದರಲ್ಲಿದ್ದ ತಲಾ ಒಂದೊಂದು ಲಕ್ಷ ಹಣ ಎಗರಿಸಿದ್ದಾರೆ. HDFC, SBI, Axis ಬ್ಯಾಂಕಿನ ಖಾತೆಯಲ್ಲಿದ್ದ ಹಣ ಕಳ್ಳತನವಾಗಿದೆ. UPI ಮೂಲಕ ಹ್ಯಾಕ್ ಮಾಡಿ ಹಣ ಕಳ್ಳತನ ಮಾಡಿದ್ದು, ಈ ವಂಚನೆ ಬಗ್ಗೆ ಸೈಬರ್ ಕ್ರೈಮ್ಗೆ ಸದಾನಂದಗೌಡ ಅವರು ದೂರು ನೀಡಿದ್ದಾರೆ.
ಇದನ್ನೂ ಓದಿ : ಪ್ರಧಾನಿ ಮೋದಿ 75ನೇ ಹುಟ್ಟುಹಬ್ಬದ ಸಂಭ್ರಮ.. ಬಾನಂಗಳದಲ್ಲಿ ‘ನಮೋ’ ಚಿತ್ತಾರ ಬಿಡಿಸಿದ ಡ್ರೋನ್ಗಳು!
Author: Btv Kannada
Post Views: 248







