ಬೆಂಗಳೂರು : ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಸಂಬಂಧ ಬೆಂಗಳೂರು ಮತ್ತು ಆಂಧ್ರಪ್ರದೇಶದ 16 ಕಡೆ ಇಂದು ಕೇಂದ್ರ ತನಿಖಾ ದಳ (CBI) ದಾಳಿ ನಡೆಸಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ಸರ್ಕಾರಿ ಹಣವನ್ನು ಕದ್ದು ಸಂಬಂಧಿಕರು ಮತ್ತು ಆಪ್ತರು ಖಾತೆಗಳಿಗೆ ಕಳುಹಿಸಿದ ಪ್ರಕರಣ ಸಂಬಂಧ ಸಿಬಿಐ ರೇಡ್ ಮಾಡಿದೆ.
ಕರ್ನಾಟಕ ಸರ್ಕಾರದ ಅಧೀನದಲ್ಲಿರುವ ವಾಲ್ಮೀಕಿ ನಿಗಮ ಸರ್ಕಾರಿ ಸಂಸ್ಥೆಯು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಎಂಜಿ ರಸ್ತೆ ಶಾಖೆಯಲ್ಲಿ ಖಾತೆಯನ್ನು ಹೊಂದಿತ್ತು. ಈ ಪ್ರಕರಣವನ್ನು ಜೂನ್ 3, 2024 ರಂದು ದಾಖಲಿಸಲಾಗಿದೆ. ಖಾತೆಗಳಿಂದ 84.63 ಕೋಟಿ ರೂ. ವಂಚನೆ, ನಕಲಿ ದಾಖಲೆಗಳು ಮತ್ತು ತಪ್ಪಾಗಿ ವರ್ಗಾವಣೆ ಮಾಡಲಾಗಿದೆ ಎಂದು ದೂರು ನೀಡಲಾಗಿದೆ. ಈ ಹಣ ವರ್ಗಾವಣೆಯು ಫೆಬ್ರವರಿ 21, 2024 ರಿಂದ ಮೇ 6, 2024ರ ನಡುವೆ ನಡೆಯಿತು.
ಇಂದು ಬಳ್ಳಾರಿ ಉದ್ಯಮಿ ಕುಮಾರಸ್ವಾಮಿ ಎಂಬುವವರ ಮೇಲೆ CBI ರೇಡ್ ಮಾಡಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಸಂಬಂಧ ಮಾಜಿ ಸಚಿವ ನಾಗೇಂದ್ರ ಅವರ ಆಪ್ತರಾಗಿರುವ ಹಾಲಿ ಬಳ್ಳಾರಿ ಕಾರ್ಪೊರೇಟರ್ ಕುಮಾರಸ್ವಾಮಿ ಹಾಗೂ ಅವರ ಮಗ ಗೋವಿಂದರಾಜು ಮನೆ ಮೇಲೆ CBI ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಬಳ್ಳಾರಿಯ ಗಾಂಧಿನಗರದಲ್ಲಿರುವ ಮನೆಗಳಲ್ಲಿ ಸಿಬಿಐ ಅಧಿಕಾರಿಗಳಿಂದ ಪರಿಶೀಲನೆ ಮಾಡಲಾಗಿದೆ. ಕುಮಾರಸ್ವಾಮಿ ಅವರು ಮೊಟ್ಟೆ ವ್ಯಾಪಾರ ಸೇರಿ ಹಲವು ಉದ್ಯಮ ನಡೆಸುತ್ತಿದ್ದಾರೆ. ಇನ್ನು ವಾಲ್ಮೀಕಿ ಹಗರಣದ ಆರೋಪಿ ನೆಕ್ಕಂಟಿ ನಾಗರಾಜ್ ಖಾತೆಯಿಂದ ಗೋವಿಂದರಾಜು ಖಾತೆಗೆ ಹಣ ವರ್ಗಾವಣೆ ಆಗಿದ್ದು, ಈ ಸಂಬಂಧ ಗೋವಿಂದ ರಾಜು ಮನೆ ಮೇಲೆ CBI ದಾಳಿ ಮಾಡಲಾಗಿದೆ.
ಇದನ್ನೂ ಓದಿ : ವೋಟರ್ ಐಡಿ ಕೇಸಲ್ಲಿ ಮುನಿರತ್ನ ನಾಯ್ಡು ವಿರುದ್ಧ ಕಾನೂನು ಕ್ರಮ – MLC ಮುನಿರಾಜ್ ಗೌಡ!







