ಬೆಂಗಳೂರು : ವರನಟ ಡಾ. ರಾಜ್ಕುಮಾರ್ ಬಗ್ಗೆ ಅವಹೇಳನಕಾರಿ ಮಾತು ಹರಿಬಿಟ್ಟವನನ್ನು ಇದೀಗ ಸಿಸಿಬಿ ಪೊಲೀಸರು ಜೈಲಿಗಟ್ಟಿದ್ದಾರೆ. ವಿನೋದ್ ಶೆಟ್ಟಿ ಬಂಧಿತ ಆರೋಪಿ.

ಆರೋಪಿ ವಿನೋದ್ ಶೆಟ್ಟಿ, ವರನಟ ರಾಜ್ಕುಮಾರ್ ಹಾಗೂ ಅವರ ಕುಟುಂಬದವರ ಬಗ್ಗೆ ಅವಾಚ್ಯ ಶಬ್ಧದಿಂದ ನಿಂದಿಸಿದ್ದ. ಅಷ್ಟೇ ಅಲ್ಲದೆ ಬಾಯಿಗೆ ಬಂದಂತೆ ಮಾತಾಡಿ ತಾಕತ್ತಿದ್ರೆ ಬನ್ನಿ ಎಂಬ ದುರಹಂಕಾರದ ತೋರಿದ್ದ. ಏಕವಚನದಲ್ಲೇ ವರನಟ ಹಾಗೂ ಕುಟುಂಬದವರ ಬಗ್ಗೆ ಮಾತನಾಡಿದ್ದ ವಿನೋದನನ್ನ ಇದೀಗ ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಸಮಾಜಿಕ ಜಾಲತಾಣದಲ್ಲಿ ಹೆಸರಾಗುತ್ತೆ ಅನ್ನೋ ಕಾರಣಕ್ಕೆ ನಾಲಿಗೆ ಹರಿಬಿಟ್ಟಿದ್ದ ವಿನೋದ ಇದೀಗ ಜೈಲೂಟಕ್ಕೆ ರೆಡಿಯಾಗಿ ಕುಳಿತಿದ್ದಾನೆ.
ಇದನ್ನೂ ಓದಿ : ಕನ್ನಡ ಚಿತ್ರರಂಗ ಕಂಡ ಮೇರು ನಟಿ ಲೀಲಾವತಿಯವರಿಗೂ ‘ಕರ್ನಾಟಕ ರತ್ನ’ ನೀಡಿ – ಸೋಷಿಯಲ್ ಮೀಡಿಯಾದಲ್ಲಿ ಅಭಿಯಾನ ಶುರು!
Author: Btv Kannada
Post Views: 362







