ಬೆಂಗಳೂರು : ಟ್ರಾಫಿಕ್ ಫೈನ್ ಪಾವತಿಗೆ 50% ಡಿಸ್ಕೌಂಟ್ ನೀಡಿದ್ದಕ್ಕೆ ಭರ್ಜರಿ ರೆಸ್ಪಾನ್ಸ್ ದೊರೆತಿದೆ. ಬೆಂಗಳೂರು ಸಂಚಾರಿ ಪೊಲೀಸ್ ಇಲಾಖೆ ಬರೋಬ್ಬರಿ 21 ದಿನಗಳ ಕಾಲ ಟ್ರಾಫಿಕ್ ಫೈನ್ ಕಟ್ಟಲು ರಿಯಾಯಿತಿ ನೀಡಿದ್ದು, ಈವರೆಗೆ 68,59,44,800 ರೂ. ದಂಡ ಸಂಗ್ರಹವಾಗಿದೆ.

ಬೆಂಗಳೂರು ಸಂಚಾರಿ ಪೊಲೀಸರು ವಾಹನ ಸವಾರರಿಗೆ ಕಳೆದ ತಿಂಗಳ ಆಗಸ್ಟ್ 23 ರಿಂದ ಸೆಪ್ಟೆಂಬರ್ 12 ರ ವರೆಗೆ 50% ಡಿಸ್ಕೌಂಟ್ ನೀಡಿದ್ದರು. ಕೇವಲ ಬೆಂಗಳೂರು ವ್ಯಾಪ್ತಿಯಲ್ಲಿ ನಿಯಮ ಉಲ್ಲಂಘಿಸಿದವರಿಗೆ ಮಾತ್ರ ದಂಡ ಪಾವತಿಸಲು ಅವಕಾಶವಿತ್ತು.
ಸದ್ಯ ನಾಳೆಯೇ 50% ಡಿಸ್ಕೌಂಟ್ನಲ್ಲಿ ಟ್ರಾಫಿಕ್ ಫೈನ್ ಕಟ್ಟಲು ಕೊನೆಯ ದಿನವಾಗಿದ್ದು, 50% ಟ್ರಾಫಿಕ್ ಫೈನ್ ರಿಯಾಯಿತಿ ಹಿನ್ನಲೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ನಿನ್ನೆಯವರಿಗೆ 24,47,734 ಪ್ರಕರಣಗಳು ಇತ್ಯರ್ಥಗೊಂಡಿದ್ದು, 68,59,44,800 ರೂ. ದಂಡ ಸಂಗ್ರಹವಾಗಿದೆ.
ಇದನ್ನೂ ಓದಿ : ಅಪ್ರಾಪ್ತ ಯುವತಿಗೆ ಲೈಂಗಿಕ ಕಿರುಕುಳ ಆರೋಪ – ಬಸ್ ಸಿಬ್ಬಂದಿಗೆ ಹಿಗ್ಗಾಮುಗ್ಗಾ ಥಳಿಸಿದ ಕುಟುಂಬಸ್ಥರು!
Author: Btv Kannada
Post Views: 337







