ಬೆಂಗಳೂರು : ಬಸ್ನಲ್ಲಿ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಖಾಸಗಿ ಬಸ್ ಸಿಬ್ಬಂದಿಗೆ ಕುಟುಂಬಸ್ಥರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಬೆಂಗಳೂರಿನ ಚಾಲುಕ್ಯ ಸರ್ಕಲ್ನಲ್ಲಿ ನಡೆದಿದೆ.

ಬಸ್ನಲ್ಲಿ ಹೈದರಾಬಾದ್ನಿಂದ ಬೆಂಗಳೂರಿಗೆ ಬರುತ್ತಿದ್ದ ಅಪ್ರಾಪ್ತ ಯುವತಿ ಫೋನ್ ಚಾರ್ಜಿಂಗ್ ಹಾಕಿದ್ದರು. ಮಧ್ಯರಾತ್ರಿ ಸಿಬ್ಬಂದಿ ಯುವಕ ಟಾರ್ಚರ್ ಕೊಟ್ಟಿದ್ದಾನೆ. ಫೋನ್ ವಾಪಸ್ ಕೊಡಬೇಕಂದ್ರೆ ಕಿಸ್ ಕೊಡು ಎಂದು ಕಾಮುಕ ಕಿರುಕುಳ ನೀಡಿದ್ದಾನೆ.
ಲೈಂಗಿಕ ಕಿರುಕುಳದ ಬಗ್ಗೆ ಯುವತಿ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದು, ಬೆಂಗಳೂರಿಗೆ ಖಾಸಗಿ ಬಸ್ ಬಂದ ಕೂಡಲೇ ಕುಟುಂಬಸ್ಥರು ಕಿರುಕುಳ ಕೊಟ್ಟ ಯುವಕನ ಬಟ್ಟೆ ಬಿಚ್ಚಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಳಿಕ ಯುವಕನನ್ನು ವಿಧಾನಸೌಧ ಠಾಣೆ ಪೊಲೀಸರ ವಶಕ್ಕೆ ನೀಡಿದ್ದಾರೆ.
ಇದನ್ನೂ ಓದಿ : ಜೀತು ಜೋಸೆಫ್ ನಿರ್ದೇಶನದ “ಮಿರಾಜ್” ಸೆ.19ಕ್ಕೆ ರಿಲೀಸ್ – ‘ಬೆಂಗಳೂರು ಕುಮಾರ್ ಫಿಲಂಸ್’ ವಿತರಣೆ!
Author: Btv Kannada
Post Views: 346







