ಬೆಂಗಳೂರು : ಮದ್ದೂರು ಪಟ್ಟಣದಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪ ಹಿನ್ನಲೆ ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ವಿರುದ್ದ FIR ದಾಖಲಾಗಿದೆ. ಈ ಬೆನ್ನಲ್ಲೇ ಇದೀಗ ಪ್ರತಿಕ್ರಿಯಿಸಿರುವ ಸಿಟಿ ರವಿ ಅವರು ಸಾಮಾಜಿಕ ಜಾಲತಾಣದಲ್ಲಿ ಗುಡುಗಿದ್ದಾರೆ.

‘ಜಗ್ಗುವುದಿಲ್ಲ, ಬಗ್ಗುವುದಿಲ್ಲ.. ಹಿಂದುತ್ವಕ್ಕಾಗಿ, ಹಿಂದೂ ಕಾರ್ಯಕರ್ತರಿಗಾಗಿ ಅದೆಷ್ಟೇ ಎಫ್ಐಆರ್ಗಳು ಬರಲಿ.. ದೇಶ, ಧರ್ಮದ ವಿಚಾರದಲ್ಲಿ ತಲೆಬಾಗುವ ಮಾತೇ ಇಲ್ಲ’ ಎಂದು ಬರೆದು ಆಕ್ರೋಶ ಹೊರಹಾಕಿದ್ದಾರೆ.
MLC ಸಿ.ಟಿ ರವಿ ವಿರುದ್ದ ಕೇಸ್ ದಾಖಲಾಗಿದ್ದೇಕೆ? ಮದ್ದೂರಿನಲ್ಲಿ ಗಣೇಶ ಮೆರವಣಿಗೆ ವೇಳೆ ನಡೆದಿದ್ದ ಕಲ್ಲು ತೂರಾಟದ ಬಳಿಕ ಬುಧವಾರ (ಸೆ.10) ಬಿಜೆಪಿ-ಜೆಡಿಎಸ್ನಿಂದ ಸಾಮೂಹಿಕ ಗಣೇಶ ವಿಸರ್ಜನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ವೇದಿಕೆಯಲ್ಲಿ ಸಿ.ಟಿ.ರವಿ ಭಾಷಣ ಮಾಡಿದ್ದರು. ಭಾಷಣದ ವೇಳೆ ಪ್ರಚೋದನಕಾರಿಯಾಗಿ ಮಾತನಾಡಿದ ಆರೋಪ ಸಂಬಂಧ ಮದ್ದೂರು ಪೊಲೀಸರು MLC ಸಿ.ಟಿ ರವಿ ವಿರುದ್ದ ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದಾರೆ. MLC ಸಿ.ಟಿ ರವಿ ಅವರು ಮುಸ್ಲಿಂರ ವಿರುದ್ದ ಮಾತನಾಡಿ ಕೋಮು ಸೌಹಾರ್ದತೆಗೆ ಭಂಗ ತಂದಿರುವ ಆರೋಪ ಕೇಳಿಬಂದಿದ್ದು, ಅನ್ಯ ಸಮುದಾಯಗಳ ಮಧ್ಯೆ ದ್ವೇಷ ಉಂಟುಮಾಡುವ ಮತ್ತು ಸೌಹಾರ್ದತಾ ಭಾವನೆಗಳಿಗೆ ಭಾದಕವಾಗುವಂತೆ, ವೈರತ್ವ, ದ್ವೇಷ ಉಂಟಾಗುವಂತೆ ಭಾಷಣ ಮಾಡಿದ ಹಿನ್ನೆಲೆ ಆರೋಪ BNSS ಕಾಯ್ದೆ 176ರ ಅಡಿ MLC ಸಿ.ಟಿ ರವಿ ವಿರುದ್ದ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ : ಬೆಂಗಳೂರಲ್ಲಿ ಹೆಚ್ಚಾದ ರಾಬರ್ಸ್ ಹಾವಳಿ.. ನಿವೃತ್ತ ACP ಮೇಲೆಯೇ ಹಲ್ಲೆ ನಡೆಸಿ 8 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ ಖದೀಮರು!







