ಕೋರ್ಟ್​ ಆದೇಶದ ಬೆನ್ನಲ್ಲೇ ದರ್ಶನ್​ಗೆ ಸಿಕ್ತು ಚಾಪೆ, ದಿಂಬು, 2 ಜಮ್ಖಾನ – ‘ದಾಸ’ನಿಗೆ ಇನ್ನು ಸುಖ ನಿದ್ರೆ!

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವಂತಹ ದರ್ಶನ್​​ಗೆ ಕೋರ್ಟ್ ಆದೇಶದ ನಂತರ ಅಧಿಕಾರಿಗಳು ಚಾಪೆ, ತಲೆದಿಂಬು ಹಾಗೂ ಎರಡು ಜಮ್ಖಾನ ನೀಡಿದ್ದಾರೆ.

ಜೈಲಿನಲ್ಲಿ ಮೂಲಸೌಕರ್ಯಗಳಿಲ್ಲದೆ ದರ್ಶನ್ ಒದ್ದಾಡುತ್ತಿದ್ದು, ಬೆಡ್​ಶೀಟ್ ಹಾಗೂ ದಿಂಬು ಒದಗಿಸುವಂತೆ ನಟನ ವಕೀಲರು ಅರ್ಜಿ ಹಾಕಿದ್ದರು. ದರ್ಶನ್​ಗೆ ಬೆಡ್​ಶೀಟ್ ಹಾಗೂ ತಲೆದಿಂಬು ಕೇಳಿ ಸಲ್ಲಿಸಿದ್ದ ಅರ್ಜಿಯ ತೀರ್ಪು ಕೋರ್ಟ್ ಸೆಪ್ಟೆಂಬರ್ 9ರಂದು ನೀಡಿದೆ. 

ಮೂಲಭೂತ ಸೌಲಭ್ಯ ಒದಗಿಸಲು ಕೋರ್ಟ್ ಸೂಚನೆ ನೀಡಿದೆ. ಜೈಲು ನಿಯಾಮಾವಳಿಗಳ ಅನುಸಾರ ಸೌಲಭ್ಯ ಒದಗಿಸಲು ಕೋರ್ಟ್ ಆದೇಶಿಸಿದ್ದು ಕನಿಷ್ಠ ಸೌಲಭ್ಯ ಒದಗಿಸುವಂತೆ ಆದೇಶಿಸಿತ್ತು. ಹಾಗಾಗಿ ದರ್ಶನ್‌ಗೆ ಇಂದು ಎರಡು ಜಮ್ಖಾನ ಹಾಗೂ ಚಾಪೆ, ದಿಂಬನ್ನು ಜೈಲಿನ ಅಧಿಕಾರಿಗಳು ನೀಡಿದ್ದಾರೆ. ಮಂಗಳವಾರ ರಾತ್ರಿ ಕೇಂದ್ರ ಕಾರಾಗೃಹಕ್ಕೆ ಕೋರ್ಟ್ ಆದೇಶದ ಪ್ರತಿ ತಲುಪಿದ್ದು, ಅದರಂತೆ ದರ್ಶನ್‌ಗೆ ತನ್ನ ಸೆಲ್ ಮುಂದೆ ವಾಕಿಂಗ್ ಮಾಡಲು ಅವಕಾಶ ಕೂಡ ದೊರೆತಿದೆ.

ಇನ್ನು ಪ್ರಮುಖವಾಗಿ ದರ್ಶನ್ ಹಾಗೂ ಗ್ಯಾಂಗನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡುವಂತೆ ಜೈಲು ಅಧಿಕಾರಿಗಳು ಅರ್ಜಿ ಹಾಕಿದ್ದರು. ಆದರೆ ಈ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದೆ. ಇದರಿಂದಾಗಿ ದರ್ಶನ್‌ಗೆ ಸ್ವಲ್ಪಮಟ್ಟಿಗೆ ರಿಲೀಫ್ ಸಿಕ್ಕಿದೆ.

ಇದನ್ನೂ ಓದಿ : ಆನ್‌ಲೈನ್ ಸಾಲ ಆ್ಯಪ್‌ನಿಂದ ವಂಚನೆ – ಮನನೊಂದು ಯುವಕ ಆತ್ಮಹತ್ಯೆ!

Btv Kannada
Author: Btv Kannada

Read More