ಹಾವೇರಿ : ತಾಯಿಯೊಬ್ಬಳು ಪ್ರಿಯಕರನಿಗಾಗಿ ಹೆತ್ತ ಮಗಳನ್ನೇ ಕೊಂದ ಘಟನೆ ಹಾವೇರಿ ಜಿಲ್ಲೆಯ ಗುಡ್ಡದ ಅನ್ವೇರಿ ಗ್ರಾಮದಲ್ಲಿ ನಡೆದಿದೆ. 4 ವರ್ಷದ ಪ್ರಿಯಾಂಕ ಕೊಲೆಯಾದ ಮಗು.

ಹತ್ಯೆಯಾದ ಮಗುವಿನ ತಾಯಿ ಗಂಗಮ್ಮಳಿಗೆ ಅಣ್ಣಪ್ಪ ಮಡಿವಾಳರ ಎಂಬಾತನ ಜೊತೆ ಅಕ್ರಮ ಸಂಬಂಧ ಇತ್ತು. ಈ ಹಿನ್ನೆಲೆ ಗಂಗಮ್ಮ ಗಂಡನನ್ನ ಬಿಟ್ಟು ಪ್ರಿಯಕರನ ಜೊತೆ ವಾಸವಾಗಿದ್ದಳು. ನಂತರ ತಮ್ಮಿಬ್ಬರ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತೆ ಅಂತೇಳಿ ಪಾಪಿ ತಾಯಿ ಮಗುವನ್ನು ಹತ್ಯೆಗೈದಿದ್ದಾಳೆ. ಗಂಗಮ್ಮ ಮತ್ತು ಆಕೆಯ ಪ್ರಿಯಕರ ಸೇರಿ ಆಗಸ್ಟ್ 05 ರಂದು ಮಗುವನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಬಳಿಕ ತುಂಗಾಮೇಲ್ದಂಡೆ ಕಾಲುವೆಗೆ ಶವ ಎಸೆದು ಸುಟ್ಟು ಹಾಕಲು ಯತ್ನಿಸಿದ್ದಾರೆ.

ಗಂಗಮ್ಮಳ ಪತಿ ನನಗೆ ಮಗಳನ್ನಾದರೂ ಕೊಡು ಎಂದಾಗ ಈ ಕೇಸ್ ಬೆಳಕಿಗೆ ಬಂದಿದ್ದು, ಬಾಲಕಿಯ ದೇಹ ಅರ್ಧ ಸುಟ್ಟು ಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಸಂಬಂಧ ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಗಂಗಮ್ಮ & ಅಣ್ಣಪ್ಪನನ್ನು ರಾಣೇಬೆನ್ನೂರು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ : 3 ಕೋಟಿ ವಂಚನೆ ಪ್ರಕರಣ – ಹೈಕೋರ್ಟ್ನಿಂದ ಧ್ರುವ ಸರ್ಜಾಗೆ ಬಿಗ್ ರಿಲೀಫ್!







