ಮೈಸೂರು : ಮೈಸೂರು ಪಾಕ್ ಪ್ರಿಯರೇ ಎಚ್ಚರ.. ನೀವು ತಿನ್ನೋ ಸಿಹಿ ನಿಮ್ಮ ಆರೋಗ್ಯಕ್ಕೆ ಮಾರಕ ಆಗ್ತಿದೆ. ಈಗ ಸಿಹಿ ಜೊತೆ ಖಾರಾ ಮಿಕ್ಸ್ಚರ್ ಕೂಡ ಆರೋಗ್ಯಕ್ಕೆ ಡೇಂಜರ್ ಆಗಿದೆ.

ಸಿಹಿ ತಿನಿಸುಗಳಲ್ಲಿ ಕೃತಕ ಬಣ್ಣ ಬಳಕೆ ಮಾಡ್ತಿರೋದು ಆಹಾರ ಸುರಕ್ಷತಾ ಇಲಾಖೆ ನಡೆಸಿದ ವಿಶ್ಲೇಷಣೆಯಲ್ಲಿ ಬಹಿರಂಗವಾಗಿದೆ. ಗೋಬಿ, ಕಬಾಬ್ ಆಯ್ತು ಇದೀಗ ಸಿಹಿ, ಖಾರಾ ತಿಂಡಿಗಳಿಗೂ ಕೃತಕ ಬಣ್ಣ ಬಳಕೆ ದೃಢವಾಗಿದೆ. ಹಾಗಾಗಿ ಇನ್ನುಂದೆ ರಾಜ್ಯದಲ್ಲಿ ಸಿಹಿ ತಿಂಡಿ, ಖಾರಾ ಮಿಕ್ಸ್ಚರ್ಗಳು ಬ್ಯಾನ್ ಆಗುವ ಸಾಧ್ಯತೆಯಿದೆ.
ಆಹಾರ ಇಲಾಖೆ ನಡೆಸಿದ ಅಭಿಯಾನದಲ್ಲಿ ಸಂಗ್ರಹಿಸಿದ್ದ ಸ್ಯಾಂಪಲ್ಸ್ನಲ್ಲಿ ಕೃತಕ ಬಣ್ಣ ಪತ್ತೆಯಾಗಿದ್ದು, ವಿವಿಧ ಆಹಾರ ತಿನಿಸುಗಳ ರಾಜ್ಯಾದ್ಯಂತ 3787 ಮಾದರಿ ಸ್ಯಾಂಪಲ್ಸ್ಗಳನ್ನ ಆಹಾರ ಇಲಾಖೆ ಸಂಗ್ರಹಿಸಿತ್ತು, ಈ ಸಿಹಿ, ಖಾರಾ ಪದಾರ್ಥಗಳನ್ನ ಲ್ಯಾಬ್ ಕಳುಹಿಸಲಾಗಿತ್ತು. ಲ್ಯಾಬ್ ಟೆಸ್ಟ್ನಲ್ಲಿ 3787 ಮಾದರಿ ಪೈಕಿ 374 ಮಾದರಿಗಳು ಅಸುರಕ್ಷಿತ ಅನ್ನೋದು ಬೆಳಕಿಗೆ ಬಂದಿದೆ.
ಆಹಾರ ಇಲಾಖೆ ಸಂಗ್ರಹಿಸಿದ್ದ ಸ್ಯಾಂಪಲ್ಸ್ಗಳು ಯಾವುವು?
- ಜಿಲೇಬಿ, ಖೋವಾ, ಚಟ್ನಿಗಳು, ಸಾಸ್‌ಗಳು,
- ಶರಬತ್ತು, ಐಸ್‌ಕ್ರೀಂ, ಹಣ್ಣಿನ ಜ್ಯೂಸ್‌ಗಳು, ತಂಪು ಪಾನೀಯಗಳು
Author: Btv Kannada
Post Views: 318







